ಲಸಿಕೆ ಕೇಂದ್ರಗಳಿಗೆ ಜಿಲ್ಲಾ ಧಿಕಾರಿ ಅಶ್ವತಿ ಭೇಟಿ: ಪರಿಶೀಲನೆ

 


ವಿಜಯ ಸಂಘರ್ಷ

ಕೆ.ಆರ್.ಪೇಟೆ : ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ತಾಲೂಕಿನ 34 ಗ್ರಾಮ ಪಂಚಾಯಿತಿ ಹಳ್ಳಿಗಳು ಹಾಗೂ 5 ಪುರಸಭಾ ವ್ಯಾಪ್ತಿಯ ಕೇಂದ್ರ ಸೇರಿದಂತೆ 40 ಕಡೆ ಲಸಿಕೆ ನೀಡಲಾಯಿತು.

ತಾಲೂಕಿನ ತೆಂಡೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದನೂರು ಮತ್ತು ಅಗಸರಹಳ್ಳಿ ಗ್ರಾಮದ ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಶ್ವತಿ ಭೇಟಿ ನೀಡಿ ಪರಿಶೀಲಿಸಿದರು.

45 ವರ್ಷದ ಮೇಲ್ಪಟ್ಟವರಿಗೆ ಅಭ್ಯಾಸ ನಡೆಯುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರಕವಾಗುತ್ತದೆ. ಮುಂದೆ ಪ್ರತಿ ಹಳ್ಳಿಗಳಲ್ಲೂ ಲಸಿಕೆ ಅಭಿಯಾನವನ್ನು ಕೈಗೊಂಡು 18 ರಿಂದ 40 ವರ್ಷದೊಳಗಿನ ವಯೋಮಾನ ದವರಿಗೂ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ: ಬಿ ಪಿ ಪ್ರಸಾದ್,ಪಿಡಿಓ ಎಚ್.ಎಂ, ರವಿಕುಮಾರ್, ರೋಹಿಣಿ ಮಹೇಶ್, ಉಪಸ್ಥಿತರಿದ್ದರು.

ವರದಿ: ಸಿ.ಆರ್ ಜಗದೀಶ್ ಕೆ ಆರ್ ಪೇಟೆ

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು