ವಿಜಯ ಸಂಘರ್ಷ
ಶಿವಮೊಗ್ಗ : ಜು.19 ಮತ್ತು 21 ರಂದು ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ 150 ಪರೀಕ್ಷೆ ಕೇಂದ್ರಗಳನ್ನ ರಚಿಸಲಾಗಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ 200 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಇಲ್ಲಿ ಒಬ್ವರು ಆಶಾ ಕಾರ್ಯಕರ್ತೆ ಮತ್ತು ಪ್ಯಾರ ಮೆಡಿಕಲ್ ಸ್ಟಾಫ್ ಗಳನ್ನ ನಿಯೋಜಿಸಲಾಗುತ್ತಿದೆ.
ಈಗಾಗಲೇ ಶಾಲೆಗಳನ್ನ ಸ್ಯಾನಿಟೈಜಿಂಗ್ ನಡೆಸಲಾಗಿದೆ. 25 ಸಾವಿರ ಮಾಸ್ಕ್ ಗಳನ್ನ ತರಿಸಲಾಗಿದ್ದು ಪರೀಕ್ಷೆ ನಡೆಯುವ ಕೇಂದ್ರಗಳಿಗೆ ಮಾಸ್ಕ್ ರವಾನಿಸಲಾಗುವುದು.
ಈ ಬಾರಿ 25025 ಜನ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸುತ್ತಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ಈಬಾರಿ ಸುಮಾರು 1000 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲೆಯಲ್ಲಿ 150 ಪರೀಕ್ಷಾಕೇಂದ್ರಗಳಿದ್ದು ಶಿವಮೊಗ್ಗ ತಾಲೂಕಿನಲ್ಲಿ 45 ಪರೀಕ್ಷೆ ಕೇಂದ್ರಗಳು, ಭದ್ರಾವತಿ 25, ಸೊರಬ 17, ಸಾಗರ 18, 9 ಹೊಸನಗರದಲ್ಲಿ, 11 ತೀರ್ಥಹಳ್ಳಿ ಹಾಗೂ ಶಿಕಾರಿಪುರದಲ್ಲಿ 25 ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ಬಾರಿ 80 ಪರೀಕ್ಷೆ ಕೇಂದ್ರಗಳು ತೆರೆಯಲಾಗಿದ್ದು 24 ಸಾವಿರಕ್ಕೂ ಹೆಚ್ಚು ಪರೀಕ್ಷೆ ಎದುರಿಸಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795
