ವಿಜಯ ಸಂಘರ್ಷ
*ಅರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಪರಿಸರ ಪ್ರೇಮಿ ಇಂದ ಆರೋಗ್ಯದ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ : ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸಾರ್ವಜನಿಕರಲ್ಲಿ ಮನವಿ.*
ಕೆ ಆರ್ ಪೇಟೆ : ತಾಲೂಕಿನ ಬೂಕನಕೆರೆ ಹೋಬಳಿಯ ದೊಡ್ಡನಕಟ್ಟೆ ಗ್ರಾಮದಲ್ಲಿ ಅರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಕಾರ ದೊಂದಿಗೆ ಸೊಳ್ಳೆಯಿಂದ ಹರಡುವ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ದಂತ ಕಾಯಿಲೆಗಳನ್ನು ನಿಯಂತ್ರಿಸುವ ಬಗ್ಗೆ ಜನರಲ್ಲಿ ಜನ ಜಾಗೃತಿ ಮೂಡಿಸಿದರು.
ಪರಿಸರಪ್ರೇಮಿ ಲವಕುಮಾರ್ ಮಾತನಾಡಿ, ನಾವು ಪರಿಸರವನ್ನು ಉಳಿಸಬೇಕಾಗಿದೆ, ಇದು ನಮ್ಮೆಲ್ಲರ ಕರ್ತವ್ಯ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು, ಕೊರೋನ ಮುಕ್ತ ಮಾಡಬಹುದು. ಇಂದು ನಾವು ಹಣಕೊಟ್ಟು ಆಕ್ಸಿಜನ ಹಾಕಿಸಿಕೊಳ್ಳುತ್ತಿದ್ದೇವೆ. ಆದರೆ ಆಮ್ಲಜನಕವನ್ನು ಪಡೆಯಬೇಕಾದಲ್ಲಿ ಪ್ರತಿಯೊಬ್ಬರು 4 ಗಿಡಗಳನ್ನು ನೆಟ್ಟರೆ ಆಮ್ಲಜನಕವನ್ನು ದೊರಕಿಸುತ್ತವೆ. ಆದ್ದ ರಿಂದ ತೊಂದರೆ ಇಲ್ಲದೆ ಉಸಿರಾಟ ಮಾಡಬಹುದಾಗಿದೆ ಎಂದು ತಿಳಿಸಿದರು ಹಾಗೂ ಗ್ರಾಮ ಪಂಚಾಯಿತಿಗೆ ಸಹಕಾರವನ್ನು ನೀಡಿ ಒಣ ಕಸ ಹಾಗೂ ಹಸಿ ಕಸವನ್ನು ವಿಂಗಡನೆ ಮಾಡಿ ಕಸ ವಿಲೇವಾರಿ ಮಾಡುವುದರಿಂದ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಪಡೆಯಬಹುದು ಇದರಿಂದ ಸಮಾಜದ ವಾತಾವರಣ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಉಷಾ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ, ಆಶಾ ಕಾರ್ಯಕರ್ತರಾದ ಪವಿತ್ರ, ತೀರ್ಥ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಸಿ.ಆರ್.ಜಗದೀಶ್, ಕೆ. ಆರ್. ಪೇಟೆ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795
