ಎಚ್ಡಿಕೆ-ಸುಮಲತಾ ವಿಚಾರಕ್ಕೇನಾದ್ರೂ ಅರ್ಥ ಇದೆಯಾ:ಕೆಎಸ್ ಈ

 


ವಿಜಯ ಸಂಘರ್ಷ

ಶಿವಮೊಗ್ಗ: ಸುಮಲತಾ ಮತ್ತು ಕುಮಾರಸ್ವಾಮಿ ಯವರ ವಿಚಾರ ಬಿಟ್ಟು ಬಿಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್​ ಈಶ್ವರಪ್ಪ ಮಾಧ್ಯಮದವರಿಗೆ ಮನವಿ ಮಾಡಿದರು.

ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನಿಮಗೆ ಬೇರೆ ಯಾವ ವಿಚಾರವ ಇಲ್ವಾ? ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳು ಇವೆ. ಅದನ್ನು ಬಿಟ್ಟು ಅವರು ಏನ್ ಹೇಳಿದ್ರು, ಇವರೇನು ಹೇಳಿದ್ರು ಅಂತ ತೋರಿಸುತ್ತೀರಾ. ಇದಕ್ಕೇನಾದ್ರು ಅರ್ಥ ಇದೆಯಾ ಎಂದು ಪ್ರಶ್ನಿಸಿದರು.

ಈಗಾಗಲೇ, ಕೆಆರ್​ಎಸ್ ಬಿರುಕು ವಿಚಾರದ ಕುರಿತು ಮುರುಗೇಶ್ ನಿರಾಣಿ ಸರ್ಕಾರದ ಪರವಾಗಿ ಹೇಳಿಕೆ ಕೊಟ್ಟಿದ್ದಾರೆ. ನಾನು ಅವರಿಬ್ಬರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಸಹೋದರಿ ಸುಮಲತಾ ಹಾಗೂ ಕುಮಾರ ಸ್ವಾಮಿ ಇಬ್ಬರ ಬಗ್ಗೆಯೂ ನನಗೆ ಗೌರವವಿದೆ. ಅವರಿಬ್ಬರು ವಾಗ್ವಾದ ನಿಲ್ಲಿಸಬೇಕು. ಅವರು‌ ನಿಲ್ಲಿಸುತ್ತಾರೋ ಇಲ್ಲವೋ, ಟಿವಿಯವರು ಮೊದಲು ನಿಲ್ಲಿಸಿ ಎಂದು ಹೇಳಿದರು.

ಅವರು ಎಳೆದು ಕೊಂಡು ಹೋಗ್ತಾರೆ, ನೀವು ಹೋಗ್ತಿರಾ ಎಂದು ಗರಂ ಆದರು‌. ಜನ ಸಾಯ್ತಿದ್ದಾರೆ ಅದರ ಬಗ್ಗೆ ನೋಡಿ. ಮಾಧ್ಯಮದವರನ್ನು ನಾನು ನಿಮಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಟೀಕೆ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು