ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ


ವಿಜಯ ಸಂಘರ್ಷ 

ಕೆ ಆರ್ ಪೇಟೆ: ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿಯ ದುಡುಕನಹಳ್ಳಿ ಗ್ರಾಮದ ಕೆರೆ ಅಂಗಳದಲ್ಲಿ ಸಸಿಗಳ ನೆಡುವ ಕಾರ್ಯಕ್ರಮ ಹಾಗೂ ಕಾರ್ಯಕ್ರಮ ನಡೆಯಿತು"

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ  ಅಕ್ಕಿಹೆಬ್ಬಾಳು ವಲಯ  ದುಡುಕನಹಳ್ಳಿ ಕಾರ್ಯಕ್ಷೇತ್ರದ ವತಿಯಿಂದ ಕೆರೆಯಂಗಳದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಸಿ ನೆಟ್ಟು  ಉದ್ಘಾಟನೆ ಮಾಡಿದ ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ,  ಪ್ರತಿಯೊಬ್ಬರೂ ಮನೆ ಅಂಗಳದಲ್ಲಿ ಹಾಗೂ ತಮ್ಮ ಗದ್ದೆ ಹೊಲಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು  ಹೇಳಿದರು.




ಮೊದಲಿಂದಲೂ  ಗಿಡಮರಗಳನ್ನು ಪೋಷಿಸಿಕೊಂಡು ಬಂದಿದ್ದರೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ  ಜನಸಾಮಾನ್ಯರು  ಸಾಯುದೆ ಬದುಕುಳಿಯುತ್ತಿದ್ದರು. ನಮ್ಮ ಹಿರಿಯರು ಒಂದು ಮರ ಕಡಿಯುವ ಮುನ್ನ ಎರಡು ಗಿಡಗಳನ್ನು ನೆಟ್ಟು ನಂತರ ಮರಗಳನ್ನು ಕಡಿಯುತ್ತಿದ್ದರು.  ಇತ್ತೀಚೆಗೆ ಜನರು ಪರಿಸರ ಕಾಳಜಿ ಇಲ್ಲದೇ  ಯಥೇಚ್ಚ ವಾಗಿ ಮರ ಗಿಡಗಳನ್ನು ಕಡಿದು ಪರಿಸರ ನಾಶ ಮಾಡುತ್ತಿದ್ದಾರೆ. ಇದರಿಂದ ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಈಗಲಾದರೂ ಜನರು ಎಚ್ಚೆತ್ತುಕೊಂಡು ಮರಗಳನ್ನು ಅನಿವಾರ್ಯವಾಗಿ ಕಡಿಯುವ ಮುನ್ನ ಎರಡು ಗಿಡಗಳನ್ನು ನೆಟ್ಟು ಮುಂದಿನ ಭವಿಷ್ಯಕ್ಕೆ ಉತ್ತಮ ಪರಿಸರವನ್ನು ಕಾಪಾಡಬೇಕೆಂದರು.

ಧರ್ಮಸ್ಥಳ ಸಂಸ್ಥೆಯ ಸ್ವಸಹಾಯ ಸಂಘಗಳಿಗೆ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು  ಹಾಗೂ  ಹೇಮಾವತಿ ರವರ ಆಶಯದಂತೆ ಬ್ಯಾಂಕ್ ನೀಡಿದ ಲಾಭಾಂಶವನ್ನು ಪ್ರತಿ ಸಂಘಗಳಿಗೂ ಲಾಭಾಂಶವನ್ನು ನಗದು ರೂಪದಲ್ಲಿ ವಿತರಣೆ ಮಾಡುತ್ತಿದ್ದೇವೆ. ಈ ಲಾಭಾಂಶ ವಿತರಣೆಯು ಈ ಕೋವಿಡ್ ಸಂದರ್ಭದಲ್ಲಿ ಎಲ್ಲಾರಿಗೂ ಉಪಯೋಗವಾಗುವುದು. ಹಾಗೆಯೇ ಧರ್ಮಸ್ಥಳದ ಹೆಗಡೆ ಮಾರ್ಗದರ್ಶನದ ಹಾಗೂ  ಸಲಹೆಗಳ ಮೂಲಕ  ಸಸಿ ನೆಡುವ ಕಾರ್ಯಕ್ರಮ ಮತ್ತು ಕೆರೆಗಳನ್ನು ಅಭಿವೃದ್ಧಿ ಮಾಡುವ ಯೋಜನೆಗಳನ್ನು ಸಂಸ್ಥೆಯು ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕೆರೆಯ ಸುತ್ತಲು 150ಕ್ಕೂ ಹೆಚ್ಚಿನ ಸಸಿಗಳ ವೃಕ್ಷಾರೋಹಣ ಮಾಡಲಾಯಿತು. ಪ್ರಗತಿಪರ ರೈತರಿಗೆ ಸಸಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆಯ ನಿರ್ದೇಶಕ ಮಹಾಬಲ ಕುಲಾಲ್, ಯೋಜನಾಧಿಕಾರಿ ಮಮತಾ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಣಿ, ಅಕ್ಕಿಹೆಬ್ಬಾಳು ವಲಯದ ಮೇಲ್ವಿಚಾರಕಿ ಸರಸ್ವತಿ, ಕೃಷಿ ಅಧಿಕಾರಿ ಮನೋಹರ್, ಮಹೇಶ್, ಗೋಪಾಲಯ್ಯ, ಲಿಂಗರಾಜು,   ಯೋಜನೆಯ ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ ಕೆ. ಆರ್. ಪೇಟೆ ಜಗದೀಶ್

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು