ಮಂಡ್ಯ ಜಿಲ್ಲೆಗೆ ಕುಮಾರ ಸ್ವಾಮಿಯವರಿಂದ ಯಾವ ಅನ್ಯಾಯವಾಗಿಲ್ಲ

 


ವಿಜಯ ಸಂಘರ್ಷ

ನಾಗಮಂಗಲ : ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿಗೆ  ಕುಮಾರ ಸ್ವಾಮಿಯವರಿಂದ ಯಾವುದೇ ಅನ್ಯಾಯವಾಗಿಲ್ಲ ಎಂದು ಹಾಲು ಒಕ್ಕೂಟದ ನಿರ್ದೇಶಕ ನೆಲ್ಲಿಗೆರೆ ಬಾಲು ಹೇಳಿದರು .

ಅವರಿಂದು ಪಟ್ಟಣದ ಶಾಸಕರ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಾಸಕರ ಅವಧಿಯಲ್ಲಿ ಸಾಕಷ್ಟು ಕೆಲಸ, ಕಾಮಗಾರಿಗಳು ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕೆಂದು ಎಚ್ಚರಿಸಿದರು.

ಟಿ.ಕೆ ರಾಮೇಗೌಡ ಮಾತನಾಡಿ, ರಾಜಕಾರಣದ ಭೀಷ್ಮ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಂದ ಯಾವ ಅನ್ಯಾಯವಾಗಿಲ್ಲ. ಅವರಿಂದ ಅಧಿಕಾರ ಅನುಭವಿಸಿ ಅವರ ವಿರುದ್ಧ ಧ್ವನಿ ಎತ್ತುತ್ತಿರುವುದು ಸರಿಯಿಲ್ಲ. ಇತ್ತೀಚಿನ ರಾಜಕಾರಣದಲ್ಲಿ ಹಾಲು ಒಕ್ಕೂಟದ ಪ್ರಕರಣವನ್ನು ಬಿಂಬಿಸುತ್ತಾ ಮುಂದಿನ ಚುನಾವಣೆಗಳಲ್ಲಿ ಜನರ ಮುಂದೆ ಹೋಗಲು ಈ ಪ್ರಕರಣವನ್ನು ಅಸ್ತ್ರವಾಗಿ ಬಳಸಿದರೆ ಉತ್ತರ ಕೊಡಲು ಸಿದ್ಧರಾಗಿದ್ದಾರೆ

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರೇಗೌಡ .ನಾಗೇಶ್ ಬಸವೇಗೌಡ .ಪ್ರವೀಣ್  ಮೂಳಕಟ್ಟೆ ಶಿವರಾಂ, ನಿತೀಶ್, ರಘು, ಮುತ್ತಣ್ಣ ಅನೇಕ ಮುಖಂಡರು ಗೋಷ್ಠಿಯಲ್ಲಿ  ಉಪಸ್ಥಿತರಿದ್ದರು.

ವರದಿ : ದೇವಲಾಪುರ ಜಗದೀಶ್ ನಾಗಮಂಗಲ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು