ವಿಜಯ ಸಂಘರ್ಷ
ಶಿವಮೊಗ್ಗ : ನಗರದ ಸೂಳೆಬೈಲಿನ ನಿರ್ಮಾಣ ವಾಗುತ್ತಿರುವ ಅನಧಿಕೃತ ಲೇಔಟ್ ನಲ್ಲಿ ಇಂದು ಸೂಡಾ ಅಧಿಕಾರಿಗಳು ಪೊಲೀಸರ ಸಹಾಯದಿಂದ ತೆರವುಗೊಳಿಸಿದ್ದಾರೆ.
ಸರ್ವೇ ನಂ 95 ರೆವೆನ್ಯೂ ಸೈಟ್ ನಲ್ಲಿ ಚನ್ನಗಿರಿ ವ್ಯಕ್ತಿಯೋರ್ವರು ಎಂಬುವರು ಅನಾಧಿಕೃತ ಲೇಔಟ್ ನಿರ್ಮಿಸಲು ಮುಂದಾಗಿರುವುದಾಗಿ ತಿಳಿದು ಬಂದ ದೂರಿನ ಹಿನ್ನಲೆಯಲ್ಲಿ ಸೂಡಾ ಅಧಿಕಾರಿಗಳು ಅಭಿವೃದ್ಧಿ ಕಾಮ ಗಾರಿಗಳನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ನಗರ ಯೋಜನಾ ನಿರ್ದೇಶಕ ಶಂಕರ್, ಅಧಿಕಾರಿಗಳಾದ ಪ್ರಜ್ವಲ್, ಬಾಲರಾಜ್, ಗಂಗಾಧರ ಸ್ವಾಮಿ, ವೇಣು ಉಪಸ್ಥಿತರಿದ್ದರು.
‘ಅನಧಿಕೃತವಾಗಿ ಲೇಔಟ್ ರಚನೆ ಮಾಡಿರುವ ವಿಷಯ ಪ್ರಾಧಿಕಾರದ ಗಮನಕ್ಕೆ ಬಂದಿತ್ತು. ಸಭೆಯಲ್ಲಿಯೂ ಚರ್ಚೆಯಾಗಿ, ಅನುಮತಿ ಪಡೆಯದೆ ರಚಿಸಲಾಗಿದ್ದ ಲೇಔಟ್ ತೆರವು ಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಪ್ರಾಧಿಕಾರದ ಆಯುಕ್ತ ಮೂಕಪ್ಪ ಕರಿಭೀಮಣ್ಣ ನವರ್ ತಿಳಿಸಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795