ಜಿ ಪಂ-ತಾ ಪಂ ಅಭ್ಯರ್ಥಿ ಆಯ್ಕೆ ಸಮಿತಿ ರಚನೆ ಮಾಜಿ ಶಾಸಕ: ಚಂದ್ರ ಶೇಖರ್

 

ವಿಜಯ ಸಂಘರ್ಷ

ಕೆ ಆರ್ ಪೇಟೆ : ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಪಕ್ಷದ ಕಾರ್ಯಕರ್ತರ ಸ್ವಾಭಿಮಾನದ ಚುನಾವಣೆ ಆಗಬೇಕು. ತಾಲೂಕಿನ ಎಲ್ಲಾ ಜಿ ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ 15 ಜನರ ಆಯ್ಕೆ ಸಮಿತಿ ರಚನೆ ಮಾಡಲಾಗುವುದು. ಸಮಿತಿಯು ಆಯ್ಕೆ ಮಾಡಿದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಹೆಸರು  ಪಕ್ಷದ ಅಧ್ಯಕ್ಷರಿಗೆ ಕೂಡಲೇ ತಿಳಿಸುವಂತೆ ಮಾಜಿ ಶಾಸಕ ಚಂದ್ರಶೇಖರ್ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಂದು ಮುಂಬರುವ ಪಂಚಾಯಿತಿ ಚುನಾವಣೆ ಯಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳಿಂದ ಹಣ ನಿರೀಕ್ಷಿಸದೆ ಅಭಿವೃದ್ಧಿ ನಿರೀಕ್ಷಿಸಿ ಮತಚಲಾಯಿಸ ಬೇಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರು ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ನವರ ಅವಧಿಯ ಕಾರ್ಯಕ್ರಮಗಳನ್ನು ಮತದಾರರಿಗೆ ತಿಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲೋಪಗ ಳನ್ನು ಜನರಿಗೆ ಮುಟ್ಟಿಸಿ ಎಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಮಾತನಾಡಿ, ಅಧಿಕಾರಕ್ಕೆ ಬಂದಾಗಲೆಲ್ಲಾ ಶೋಷಿತ ಸಮುದಾಯ, ಹಿಂದುಳಿದ,  ಬಡವರ ಅಭಿವೃದ್ಧಿಗೆ ಸಾಕಷ್ಟು  ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಚುನಾವಣೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ  ಮೂಲಕ  ರಾಜ್ಯದ  ನಾಯಕರಿಗೆ  ಶಕ್ತಿ ತುಂಬೋ ಕೆಲಸವನ್ನು ನಾವು ಮಾಡಬೇಕು. ಕಳೆದ  ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಜನತೆ ಈಗ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.

ಮಾಜಿ  ಶಾಸಕ ಬಿ ಪ್ರಕಾಶ್ ಕಾರ್ಯಕರ್ತರನ್ನು ಉದ್ದೇಶಿಸಿ  ಮಾತನಾಡಿದರು.


"ವಲಸಿಗರಿಗೆ ಟಿಕೆಟ್ ಬೇಡ ಕಾರ್ಯಕರ್ತರ ಆಗ್ರಹ"

ಇತರೆ ಪಕ್ಷಗಳಿಂದ ಬಂದಿರುವ ವಲಸಿಗರ ಬದಲು ಸ್ಥಳೀಯರಿಗೆ ಟಿಕೆಟ್ ಕೊಡಿ. ವೈಯಕ್ತಿಕ ಹಿತಕ್ಕಿಂತ ಪಕ್ಷದ  ಕೆಲಸಮಾಡುವ ಕಾರ್ಯ ಕರ್ತರಿಗೆ ಪಕ್ಷದ ವೇದಿಕೆಗಳಲ್ಲಿ ಸೂಕ್ತವಾಗಿ ಗೌರವ ನೀಡಿ ಕಳೆದ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರು  ಎಲ್ಲರನ್ನೂ ಒಗ್ಗೂಡಿಸಿ ವಿರೋಧಿ ಕೆಲಸ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ಕಾರ್ಯಕರ್ತರು ಈ ಸಂದರ್ಭದಲ್ಲಿ ನಾಯಕರಿಗೆ ಕಿವಿಮಾತನ್ನು ಹೇಳಿದ್ದರು

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಕರ್ನಾಟಕ ರಾಜ್ಯ ಒಳ ಚರಂಡಿ ನಿಗಮದ ಮಾಜಿ ಅಧ್ಯಕ್ಷ ಎಂ ಡಿ ಕೃಷ್ಣಮೂರ್ತಿ, ಜಿ ಪಂ ಮಾಜಿ ಸದಸ್ಯ ಕೋಡಿ ಮಾರನಹಳ್ಳಿ  ದೇವರಾಜು, ಎಸ್. ಸಿ. ಘಟಕದ ಅಧ್ಯಕ್ಷ ರಾಜಯ್ಯ,  ಶಿವಣ್ಣ,ಗ್ರಾಮಾಂತರ ಹಾಗೂ ಪಟ್ಟಣ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಸಿ.ಬಿ. ಚೇತನ್ ಕುಮಾರ್,  ಪುರಸಭೆ ಸದಸ್ಯರಾದ ಕೆ.ಆರ್. ರವೀಂದ್ರ ಬಾಬು, ಡಿ. ಪ್ರೇಮ್ ಕುಮಾರ್,  ಕೆ.ಕೆ.ರಮೇಶ್, ಉಮೇಶ್,  ರಾಮಕೃಷ್ಣೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದ ರಾಜು,  ಬಸ್ತಿ ರಂಗಪ್ಪ, ಚೌಡೇನಹಳ್ಳಿ ದೇವರಾಜು,  ಮತ್ತಿತರರಿದ್ದರು.

ವರದಿ : ಸಿ ಆರ್ ಜಗದೀಶ್, ಕೆ.ಆರ್. ಪೇಟೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು