ಕರ್ನಾಟಕ ಚುನಾವಣೆ ಪ್ರಣಾಳಿಕೆಗಳಲ್ಲಿಯೂ ದೊರೆಲಿದೆಯೇ ಫ್ರೀ ಕರೆಂಟ್ ಭಾಗ್ಯ..?

 


ವಿಜಯ ಸಂಘರ್ಷ

ಹೊಸದಿಲ್ಲಿ: ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಇನ್ನೂ ಹಲವು ತಿಂಗಳು ಇರುವಾಗಲೇ  ಸಿಎಂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಭರವಸೆಗಳನ್ನು ನೀಡಿದೆ.

ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷವನ್ನು ಗೆಲ್ಲಿಸಿದರೆ, ದಿಲ್ಲಿ ಮಾದರಿಯಲ್ಲಿ ಉತ್ತರಾಖಂಡದಲ್ಲೂ ನಗರ ಪ್ರದೇಶದ ಜನರಿಗೆ 300 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಕೇಜ್ರಿವಾಲ್‌ ಘೋಷಿಸಿದ್ದಾರೆ.

ವಿದ್ಯುತ್‌ಗೆ ಸಂಬಂಧಿಸಿದಂತೆ ನಾಲ್ಕು ಭರವಸೆಗಳನ್ನು ಕೇಜ್ರಿವಾಲ್‌ ನೀಡಿದ್ದಾರೆ. ಮೊದಲು ನಾವು 300 ಯೂನಿಟ್‌ ಉಚಿತ ವಿದ್ಯುತ್‌ ನೀಡುತ್ತೇವೆ. ಇದರಿಂದ 1,200 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ. ಎರಡನೆಯದಾಗಿ, ಜನರು ಬಾಕಿ ಬಿಲ್‌ಗಳನ್ನು ತುಂಬುವ ಅಗತ್ಯವಿಲ್ಲ. ಮೂರನೆಯದಾಗಿ, ರಾಜ್ಯದಲ್ಲಿ ವಿದ್ಯುತ್‌ ಕಡಿತವೇ ಇರುವುದಿಲ್ಲ. ದಿನದ 24 ಗಂಟೆಯೂ ತಡೆರಹಿತ ವಿದ್ಯುತ್‌ ಪೂರೈಸಲಾಗುವುದು. ನಾಲ್ಕನೆಯದಾಗಿ ಕೃಷಿ ಉದ್ದೇಶಕ್ಕೆ ರೈತರಿಗೆ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಸಾಕಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ಇಲ್ಲಿನ ಆಡಳಿತಾರೂಢ ಸರಕಾರ ಜನರಿಂದ ಭಾರಿ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿದೆ. ಇದುವರೆಗೂ ಇಲ್ಲಿನ ಸರಕಾರ ಉಚಿತ ವಿದ್ಯುತ್‌ ಏಕೆ ಪೂರೈಸುತ್ತಿಲ್ಲ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸ ಲಿರುವ ಪಂಜಾಬ್‌ನಲ್ಲಿಯೂ ಕೇಜ್ರಿವಾಲ್‌ ಉಚಿತ ವಿದ್ಯುತ್‌ ಪೂರೈಕೆಯ ಭರವಸೆ ನೀಡಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು