ವಿಜಯ ಸಂಘರ್ಷ
ಶಿವಮೊಗ್ಗ : ಅಕ್ರಮವಾಗಿ ಗೋವು ಗಳನ್ನ ಸಾಗಿಸುತ್ತಿದ್ದ ಕಳ್ಳನನ್ನ ತುಂಗಾನಗರ ಪೊಲೀಸರು ಬಂಧಿಸಿ 5 ಗೋವುಗಳನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ವಾದಿ ಎ ಹುದಾ ಬಡಾವಣೆ ಯಲ್ಲಿ ಅಕ್ರಮವಾಗಿ ಗೋವುಗಳನ್ನ ತೆಗೆದುಕೊಂಡು ಹೋಗುವಾಗ ಮಳಲಿಕೊಪ್ಪ ತಿರುವಿನ ಬಳಿ ತುಂಗಾನಗರದ ಪಿಎಸ್ ಐ ದೂದ್ಯನಾಯ್ಕ್ ತಡೆದು ಗೋವುಗಳನ್ನ ಹೊಡೆದುಕೊಂಡು ಹೋಗುತ್ತಿದ್ದ ಮೆಹತಾಬ್ ಅಹಮದ್ (29) ವಿಚಾರಿಸಿದ್ದಾರೆ.
ಮೆಹತಾಬ್ ಅಹ್ಮದ್ ಹಣದ ಉದ್ದೇಶಕ್ಕಾಗಿಯೇ ಕರೆದುಕೊಂಡು ಹೋಗುತ್ತಿರುವುದು ದೃಢಪಟ್ಟಿದೆ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
