ವಿಜಯ ಸಂಘರ್ಷ
ತೀರ್ಥಹಳ್ಳಿ : ತಾಲೂಕಿನ ಆಗುಂಬೆಗೆ ಹೊರ ಭಾಗದಿಂದ ಬರುವ ಪ್ರವಾಸಿಗರಿಗೆ ಅಷ್ಟೇ ಸ್ವರ್ಗ. ಇಲ್ಲಿ ನೆಲೆಸಿರುವ ರೈತರಿಗೆ ನರಕ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಮಲೆನಾಡಿನಲ್ಲಿ ಆರ್ಭಟ ಮಾಡುತ್ತಿರುವ ವರುಣ ಒಂದೆಡೆ ಆದರೆ ಮಧ್ಯಾಹ್ನದ ವೇಳೆ ಬಂದ ಭಾರೀ ಬಿರುಗಾಳಿ ಮಳೆಗೆ ಶ್ರೀನಿವಾಸ ವಾಟೇಹಳ್ಳ ಎಂಬುವರ 30 ವರ್ಷದ ಅಡಿಕೆ ತೋಟದಲ್ಲಿ ಸುಮಾರು 70ಕ್ಕೂ ಹೆಚ್ಚು ಫಸಲು ಭರಿತ ಮರಗಳು ಧರೆಗೆ ಉರುಳಿದೆ.
ಅಲ್ಲದೆ ಅಕ್ಕಪಕ್ಕದ ತೋಟದಲ್ಲಿ ಅನೇಕ ಅಡಿಕೆ ಮರಗಳು ಧರೆಗೆ ಉರುಳಿದೆ. ಇದರಿಂದ ವಾಟೇಹಳ್ಳ, ಕಾರೇಕುಂಬ್ರಿ ಊರಿನಲ್ಲಿ ಸುಮಾರು 250 ಕ್ಕು ಹೆಚ್ಚು ಫಲಭರಿತ ಅಡಿಕೆ ಮರಗಳು ನಾಶವಾಗಿ ಅಪಾರ ಹಾನಿ ಸಂಭವಿಸಿದೆ.
ಇದರಿಂದ ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕ್ ಆಡಳಿತದಿಂದ ಸೂಕ್ತ ಪರಿಹಾರಕ್ಕಾಗಿ ಸಂತ್ರಸ್ತರು ಒತ್ತಾಯಿಸಿದ್ದಾರೆ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795
