ಜಿಂಕೆ ಬೇಟೆ ವ್ಯಕ್ತಿ ಬಂಧನ: ಪ್ರಕರಣ ದಾಖಲು

 


ವಿಜಯ ಸಂಘರ್ಷ

ಭದ್ರಾವತಿ: ಜಿಂಕೆ ಬೇಟೆಯಾಡಿ ಸಾಗಾಣಿಕೆ ಮಾಡುತ್ತಿದ್ದ ಓರ್ವನನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿರುವ ಘಟನೆ ನಡೆದಿದೆ.

   ತಾಲೂಕಿನ ತಿಮ್ಲಾಪುರ ಗ್ರಾಮದ ನಿವಾಸಿ ಯೋಗೀಶ್ ನಾಯ್ಕ (34) ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿ ರಬ್ಬರ್‌ಕಾಡು ನಿವಾಸಿ ಷಣ್ಮುಗ(60) ತಲೆಮರೆಸಿಕೊಂಡಿದ್ದಾನೆ.

    ಖಚಿತ ಮಾಹಿತಿ ಆಧಾರದ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ಸುಬ್ರಮಣ್ಯ ಹಾಗು ವಲಯ ಅರಣ್ಯಾಧಿಕಾರಿ ಕೆ.ಎಚ್ ಮಂಜುನಾಥ್ ನೇತೃತ್ವದಲ್ಲಿ ಸಿದ್ದಾಪುರ ಶಾಖೆಯ ಅರಣ್ಯ ವ್ಯಾಪ್ತಿಯ ಕಾಳನಕಟ್ಟೆ ಗ್ರಾಮದ ತಮ್ಮಡಿಹಳ್ಳಿ ಎಸ್.ಎಫ್ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಹೆಣ್ಣು ಜಿಂಕೆ ಬೇಟೆಯಾಡಿ ಸಾಗಾಣಿಕೆ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.

    ಮೃತಪಟ್ಟಿರುವ ಜಿಂಕೆ, ಒಂದು ನಾಡ ಬಂದೂಕು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಉಪ ವಲಯ ಅರಣ್ಯಾಧಿಕಾರಿಗಳಾದ ವಿಜಯಕುಮಾರ್ ಮಾಳಗಿ, ಬಿ.ಆರ್ ದಿನೇಶ್‌ಕುಮಾರ್, ನವೀನ್‌ಕುಮಾರ್, ಅಣ್ಣನಾಯ್ಕ್ ಮತ್ತು ಅರಣ್ಯ ರಕ್ಷಕರಾದ ನಾಗೇಂದ್ರ, ರಶೀದ್ ಬೇಗ್, ಭಾಸ್ಕರ್, ಅರಣ್ಯ ವೀಕ್ಷಕರಾದ ಸಚಿನ್, ಶಿವು ಮತ್ತು ಸೋನು  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು