ವಿಜಯ ಸಂಘರ್ಷ
ಶಿವಮೊಗ್ಗ: ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ನಾಲ್ಕು ಅಧಿಕಾರಿಗಳಿಗೆ ಅವರ ಪ್ರಾಮಾಣಿಕತೆ ಹಾಗೂ ಉತ್ತಮ ಸೇವೆಯನ್ನು ಗುರುತಿಸಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ನೀಡಿ ಗೌರವಿಸ ಲಾಗಿದೆ.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪದಕ ಪ್ರದಾನ ಸಮಾರಂಭದಲ್ಲಿ ಗೃಹರಕ್ಷಕದಳದ ಕಮಾಂಡೆಂಟ್ ಎಸ್. ಶಿವಕುಮಾರ್, ಸಹಾಯಕ ಬೋಧಕ ಹೆಚ್. ದಿನೇಶ್, ಭದ್ರಾವತಿ ಘಟಕದ ಬಿ.ಇ. ವಿಜ ಯೇಂದ್ರ ಸಾರ್ಜೆಂಟ್ ಇವರುಗಳಿಗೆ ಚಿನ್ನದ ಪದಕ ಹಾಗೂ ಹೊಳೆಹೊನ್ನೂರು ಘಟಕಾಧಿಕಾರಿ ಹೆಚ್.ಎಲ್.ಸುನೀಲ್ ಕುಮಾರ್ ಗೆ ಬೆಳ್ಳಿಪದಕವನ್ನು ಸಿಎಂ ಪ್ರದಾನ ಮಾಡಿದರು.
ಕಮಾಂಡೆಂಟ್ ಎಸ್.ಶಿವಕುಮಾರ್, ಪೊಲೀಸ್ ಇಲಾಖೆಗೆ ಪೂರಕ ಪಡೆಯಾಗಿ ಕಾನೂನು ಸುವ್ಯವಸ್ಥೆ, ಚುನಾವಣೆ, ಜಾತ್ರೆ, ಇನ್ನಿತರ ಕರ್ತವ್ಯಗಳಲ್ಲಿ ಗೃಹರಕ್ಷಕರನ್ನು ಕ್ರೂಢೀಕರಿಸಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಅವಿರತ ಶ್ರಮ ವಹಿಸಿದ್ದಾರೆ. ಇವರ ಪ್ರಾಮಾಣಿಕ ಮತ್ತು ಉತ್ತಮ ಕರ್ತವ್ಯಕ್ಕಾಗಿ ಸಿಎಂ 2018 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.
ಸಹಾಯಕ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್. ದಿನೇಶ್, ಗೃಹರಕ್ಷಕ ಇಲಾಖೆಯ ಸಮವಸ್ತ್ರ ನೀತಿ ನಿಯಮಗಳಿಗನುಸಾರವಾಗಿ ಕರ್ತವ್ಯಗಳಲ್ಲಿ ಲೋಪ ದೋಷಗ ಳಿಲ್ಲದೆ ಕರ್ತವ್ಯ ನಿರ್ವಹಿಸಿದ್ದಲ್ಲದೇ, ಕೇಂದ್ರ ಕಛೇರಿಯ ಇಲ್ಲಾ ತರಬೇತಿ ಗಳಿಗಾಗಿ ಶಿವಮೊಗ್ಗ ಜಿಲ್ಲೆಯಿಂದ ಶೇ.100 ರಷ್ಟು ಗೃಹರಕ್ಷಕರನ್ನು ನಿಯೋಜಿಸಿ ಚಿನ್ನದ ಪದಕಗಳನ್ನು ಜಿಲ್ಲೆಗೆ ತರುವಲ್ಲಿ ಶ್ರಮಿಸಿದ್ದಾರೆ. ಎಲ್ಲಾ ಕರ್ತವ್ಯಗಳನ್ನು ಲೋಪದೋಷಗಳಿಲ್ಲದೇ ನಿರ್ವಹಿಸಿದ ಪ್ರಯುಕ್ತ ಇವರಿಗೆ 2020 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.ಜೊತೆಗೆ ಹೊಳೆಹೊನ್ನೂರು ಘಟಕಾಧಿಕಾರಿ ಹೆಚ್.ಎಲ್. ಸುನೀಲ್‌ಕುಮಾರ್ ಅವರ ಕರ್ತವ್ಯ ಮತ್ತು ಪ್ರಾಮಾಣಿ ಕತೆಗೆ 2015ನೇ ಸಾಲಿನ ಬೆಳ್ಳಿಪದಕ ಹಾಗೂ ಭದ್ರಾವತಿ ಘಟಕದ ಬಿ. ಇ. ವಿಜಯೇಂದ್ರ ಸಾರ್ಜೆಂಟ್ ಅವರ ಕಾರ್ಯವೈಖರಿಗೆ 2020ನೇ ಸಾಲಿನ ಚಿನ್ನದ ಪದಕವನ್ನು ನೀಡಿ ಗೌರವಿಸ ಲಾಗಿದ್ದು, ಈ ಎಲ್ಲಾ ಅಧಿಕಾರಿಗಳಿಗೆ ಕಛೇರಿಯ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಮತ್ತು ಎಲ್ಲಾ ಗೃಹರಕ್ಷಕ/ಗೃಹರಕ್ಷಕಿಯರು ಅಭಿನಂದಿಸಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

