ವಿಜಯ ಸಂಘರ್ಷ
ಕೆ ಆರ್ ಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷ ಗೋವಿಂದೇಗೌಡ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕನ್ನಡ ನಾಡು ನುಡಿಯ ವಿಚಾರದಲ್ಲಿ ಯಾವುದೇ ರಾಜಿಯಾಗದೆ ನೊಂದವರ ಪರವಾಗಿ ಅನ್ಯಾಯ ವಿರುದ್ಧ ಹೋರಾಟದ ಮೂಲಕ ರಾಜ್ಯ ಮಟ್ಟದ ನಾಯಕರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಕನ್ನಡಿಗರ ವಿಶ್ವಾಸ ಗೆಲ್ಲಬೇಕು ಎಂದರು.
ಕರ್ನಾಟಕ ರಕ್ಷಣಾ ಪಡೆಯ ನೂತನ ಅಧ್ಯಕ್ಷರಾಗಿ ದೇವರಾಜ್.ಡಿ.ವಿ ರವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು,
ಕನ್ನಡ ಭಾಷೆ,ನೆಲ-ಜಲ ಸಂರಕ್ಷಣೆ ಹಾಗೂ ಜನಸಾಮಾನ್ಯರ ಕುಂದುಕೊರತೆಗಳನ್ನು ಪರಿಹರಿಸಲು ನ್ಯಾಯಯುತ ಹೋರಾಟದ ಮಾಡುವುದಾಗಿ ನೂತನ ಅಧ್ಯಕ್ಷ ಇದೆ ಸಂದರ್ಭದಲ್ಲಿ ತಿಳಿಸಿದರು.
ಗೌರವ ಅಧ್ಯಕ್ಷ ವಾಸುದೇವಣ್ಣ, ಜಿಲ್ಲಾಧ್ಯಕ್ಷ ಗೋವಿಂದೇಗೌಡ, ಪ್ರಧಾನ ಕಾರ್ಯದರ್ಶಿ ರಾಜೇಗೌಡ, ಉಪಾಧ್ಯಕ್ಷರಾಗಿ ಚಂದ್ರು ಕಾಡುಮೆಣಸ, ಪರಮೇಶ್ವರ್, ಕಾರ್ಯದ್ಯಕ್ಷ ನಾಗರಾಜು, ಸಹಕಾರ್ಯದರ್ಶಿ ಈರಪ್ಪ ಜೀ,ಸಂಘಟನಾ ಕಾರ್ಯದರ್ಶಿ ವಾಸು, ಖಜಾಂಚಿ ಯೋಗಣ್ಣಗೌಡ, ಸಂಚಾಲಕರನ್ನಾಗಿ ಸುರೇಶ್, ಜಗದೀಶ್ ರವರನ್ನು ಆಯ್ಕೆ ಮಾಡಿ ಅಭಿನಂದನೆ ಸಲ್ಲಿಸಿದರು.
ವರದಿ: ಸಿ.ಆರ್.ಜಗದೀಶ್
ಕೆ.ಆರ್. ಪೇಟೆ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795
