ಹೈ ಮಾಸ್ಕ್ ಖರೀದಿಯಲ್ಲಿ ಅವ್ಯವಹಾರ: ರಾಜೇಶ್ ಆರೋಪ

 

ವಿಜಯ ಸಂಘರ್ಷ



ನಾಗಮಂಗಲ: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹೈ ಮಾಸ್ಕ್ ಖರೀದಿಯಲ್ಲಿ ಅವ್ಯವಹಾರ ಮಾಡಿದ್ದು ಸಂಬಂಧಪಟ್ಟ ದಾಖಲೆ ನೀಡಲು ಮೀನಾಮೇಷ ಮಾಡುತ್ತಿದ್ದು ಕೂಡಲೇ ತನಿಖೆ ಮಾಡಬೇಕೆಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್. ಜೆ.ರಾಜೇಶ್ ಆರೋಪಿಸಿದ್ದಾರೆ.

ಅವರಿಂದು  ಪತ್ರಿಕಾ ಭವನದಲ್ಲಿ   ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು  ಹೈ ಮಾಸ್ಕ್  ಖರೀದಿಯಲ್ಲಿ ಮೂರು ಪಟ್ಟು ಬೆಲೆ ನಮೂದಿಸಿ ಖರೀದಿ ಮಾಡಿರುವುದು ಕಂಡುಬಂದಿದ್ದು, ಈ ಬಗ್ಗೆ ಮಾಹಿತಿ ಕೇಳಿದರೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅನುಮಾನಾಸ್ಪದವಾಗಿದೆ ಎಂದು ತಿಳಿಸಿದರು.

2020 -21 ನೇ ಸಾಲಿನ ಹೆಚ್ಚುವರಿ ಸಂಯುಕ್ತ ಅನುದಾನ 32.25 ಲಕ್ಷದ ಯೋಜನೆಯಲ್ಲಿ ಖರೀದಿ ಇತರೆ ಯೋಜನೆಗಳಲ್ಲಿಯೂ ಮಾಡಿರುವ ಹೈ ಮಾಸ್ಕ್ ದೀಪಗಳು ಅವ್ಯವಹಾರ ವಾಗಿದೆ. ದೀಪ ಖರೀದಿ ಮಾಡಿ ಸಂಬಂಧಪಟ್ಟ  ಪಂಚಾಯಿತಿಗಳಿಗೆ ಹಸ್ತಾಂತರ  ಮಾಡಬೇಕಾಗಿದ್ದು ಯಾವುದೇ ದಾಖಲೆಗಳು ನೀಡಿಲ್ಲವೆಂದು ತಿಳಿದು ಬಂದಿದೆ. ಕೂಡಲೇ ಯೋಜನೆಯ ಬಗ್ಗೆ ಪೂರ್ಣ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ತುಪ್ಪದ ಮಡ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಉಪಸ್ಥಿತರಿದ್ದರು

ವರದಿ : ದೇವಲಾಪುರ ಜಗದೀಶ್ ನಾಗಮಂಗಲ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು