ಲಿಡ್ಕರ್ ಎರವಲು ಗೊಂಡ ರಮೇಶ್ ಗೆ ಬೀಳ್ಕೊಡುಗೆ

 


ವಿಜಯ ಸಂಘರ್ಷ

ಭದ್ರಾವತಿ: ನಗರದ ಎಂಪಿಎಂ ನಗರಾಡಳಿತ ವಿಭಾಗದ ರಮೇಶ್ ಬೆಳಗಾವಿಯ ಲಿಡ್ಕರ್ ಗೆ  ಎರವಲು ಉದ್ಯೋಗಿ ಯಾಗಿ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ನಗರಾಡಳಿತ ವಿಭಾಗದಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಕಾರ್ಖಾನೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪ್ರಸ್ತುತ ಕರ್ತವ್ಯ ನಿರ್ವಹಿಸು ತ್ತಿರುವ ಕಾಯಂ ನೌಕರರನ್ನು ವಿವಿಧ ನಿಗಮ-ಮಂಡಳಿಗಳಲ್ಲಿ ಎರವಲು ಸೇವೆಗೆ ನಿಯೋಜನೆ ಗೊಳಿಸಲು ಆದೇಶಿಸಿದ್ದು, ಈಗಾಗಲೇ ಬಹುತೇಕ ಉದ್ಯೋಗಿಗಳು ವಿವಿಧ ನಿಗಮ ಮಂಡಳಿಗಳಲ್ಲಿ ಎರವಲು ಸೇವೆಗೆ ನಿಯೋಜನೆಗೊಂಡಿದ್ದಾರೆ.
ನಗರಾಡಳಿತ ವಿಭಾಗದಲ್ಲಿ ಉದ್ಯೋಗಿಯಾಗಿರುವ ರಮೇಶ್‌  ಬೆಳಗಾವಿ ಶಾಖೆಯಲ್ಲಿ ಲಿಡ್ಕರ್ ಗೆ ಎರವಲು ಸೇವೆಗೆ ನಿಯೋಜನೆ ಗೊಂಡಿದ್ದಾರೆ. ಇವರನ್ನು ನಗರಸಭೆ ಸದಸ್ಯ ಬಸವರಾಜ ಬಿ. ಆನೇಕೊಪ್ಪ,  ನಗರಾಡಳಿತಾಧಿಕಾರಿ ಸತೀಶ್, ಎಪಿಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಉಜ್ಜಿನಿಪುರ ವೆಂಕಟೇಶ್ ಮತ್ತಿತರರು ಸನ್ಮಾನಿಸಿ ಬೀಳ್ಕೊಟ್ಟರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು