ವಿಜಯ ಸಂಘರ್ಷ
ಕಾಗವಾಡ: ಸಮುದಾಯ ಆರೋಗ್ಯ ಕೇಂದ್ರದಲ್ಲಿ 300 ಜನರಿಗೆ ಆಗುವಷ್ಟು ಲಸಿಕೆ ಲಭ್ಯವಿದ್ದುದರಿಂದ ಜನರು ಲಸಿಕೆ ಹಾಕಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಗಿಬಿದ್ದ ಘಟನೆ ಇಂದು ನಡೆದಿದೆ
ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದ ಮಾಹಿತಿ ಯಿಂದ ಸಾಲುಸಾಲು ಜನರು ಮುಗಿಬಿದ್ದುದ್ದರಿಂದ ಸಾಮಾಜಿಕ ಅಂತರ ಮಂಗಮಾಯವಾಗಿದೆ. ಇನ್ನು ಕೋವಿಶೀಲ್ಡ್ ಲಸಿಕೆ ಮಾತ್ರ ಲಭ್ಯವಾಗಿದೆ ಕೋವ್ಯಾಕ್ಸಿನ್ ಲಭ್ಯತೆ ಇಲ್ಲದಿರುವದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
ಲಸಿಕೆ ಹಾಕಲು ಮದ್ಯಾಹ್ನದವರೆಗೂ ಸರ್ವರ್ ಸಮಸ್ಯೆ ಎದುರಾಗಿದ್ದರಿಂದ ಹಾಕಿಸಿಕೊಳ್ಳಲು ಬಂದ ಜನರು ಮಧ್ಯಾಹ್ನವಾದರೂ ಸಾಲಿನಲ್ಲೇ ನಿಂತು ನಿಂತು ಬೇಸತ್ತು ಸರ್ವರ್ ಬರೋವವರೆಗೂ ಕಾಯ್ದು ಕುಳಿತರು
ಕೋವ್ಯಾಕ್ಸಿನ್ ಕೊರತೆ ಹಿನ್ನೆಲೆ ವಕೀಲ ಅಮೀತ ದಿಕ್ಷಾಂತ ಮಾತನಾಡಿ ಕಾಗವಾಡ ಪಟ್ಟಣದಲ್ಲಿ ಸುಮಾರು ಜನ ಮೊದಲನೇ ಲಸಿಕೆ ಹಾಕಿಸಿಕೊಂಡಿದ್ದಾರೆ ಕೋವ್ಯಾಕ್ಸಿನ್ ಲಸಿಕೆ ಎರಡನೇ ಅವಧಿ ಮುಗಿದರೂ ಇನ್ನೂ ಆರೋಗ್ಯ ಕೇಂದ್ರಕ್ಕೆ ಲಸಿಕೆ ಬಂದಿಲ್ಲ. ಇದರಿಂದಾಗಿ ಅನೇಕರು ಜನ ಆಕ್ರೋಶ ಹೊರಹಾಕು ತ್ತಿದ್ದಾರೆ. ಸಮಸ್ಯೆ ಕುರಿತು ವೈಧ್ಯಾಧಿಕಾರಿಗಳನ್ನ ಕೇಳಲು ಹೋದರೆ ಸಮಂಜಸವಾದ ಉತ್ತರ ನೀಡದೇ ಹಾರಿಕೆ ಉತ್ತರ ನೀಡುತ್ತಿದ್ದಾರೆ.ತಕ್ಷಣ ಮೇಲಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೋವ್ಯಾಕ್ಸಿನ್ ಲಸಿಕೆ ಒದಗಿಸಬೇಕು ಎಂದು ಒತ್ತಾಯಿಸಿದರು.
ವೈಧ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ ಮಾತನಾಡಿ,ಕಾಗವಾಡ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 536 ಜನರು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಅವಧಿ ಐದರಿಂದ ಆರು ವಾರಗಳ ಕಾಲ ಇದೆ. ಹೀಗಾಗಿ ಈ ವಿಚಾರ ತಾಲ್ಲೂಕಾ ಆರೋಗ್ಯಾಧಿಕಾರಿ ಗಳ ಗಮನಕ್ಕೆ ತಂದಿದ್ದೇವೆ. ಕೋವ್ಯಾಕ್ಸಿನ್ ಲಸಿಕೆ ಶೀಘ್ರದಲ್ಲಿ ಪೂರೈಸುವುದಾಗಿ ಹೇಳಿದ್ದಾರೆ ಎಂದರು.
ವರದಿ : ಸಚಿನ್ ಅಥಣಿ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795