ವಿಜಯ ಸಂಘರ್ಷ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೆ. ಆರ್ ಪೇಟೆ ಉಪ ವಿಭಾಗ ದಿಂದ ಜನ ಸಂಪರ್ಕ ಸಭೆ- ಸಾರ್ವಜನಿಕರಿಂದ ದೂರುಗಳ ಸುರಿಮಳೆ.
ಕೆ ಆರ್ ಪೇಟೆ : ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪವಿಭಾಗ -2ರ ಕಛೇರಿ ಆವರಣದಲ್ಲಿಂದು ನಡೆದ ಜನ ಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆ ಗಳಿಗೆ ಸ್ಪಂದಿಸದ ಸೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಸಿ.ಬಿ.ಚೇತನ್ ಕುಮಾರ್ ಮಾತನಾಡಿ ತಾಲೂಕಿ ನಾದ್ಯಂತ ರೈತ ಟಿಸಿ ಗಳು ಸುಟ್ಟರೆ ತಕ್ಷಣಕ್ಕೆ ಸ್ಪಂದಿಸದೆ 10ರಿಂದ 15 ದಿನಗಳವರೆಗೂ ಸತಾಯಿಸುತ್ತಿರುವುದು ಸಲ್ಲದು. ಟಿಸಿ ರಿಪೇರಿಗೆ ರೈತರು ಸ್ವಂತ ಹಣದಲ್ಲಿ ರಿಪೇರಿ ಮಾಡಿಸುವುದಲ್ಲದೆ, ಸೆಸ್ಕಾಂ ಅಧಿಕಾರಿಗಳಿಗೆ ಲಂಚ ಕೊಟ್ಟು ರಿಪೇರಿ ಮಾಡಿಸುವ ದುರ್ಗತಿ ರೈತರಿಗೆ ಬಂದಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರತಿಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣ, ಎ ಇ, ಮನುಕುಮಾರ್, ಕಿರಿಯ ಇಂಜಿನಿಯರ್ ಗಳಾದ ಭಾಸ್ಕರ್, ಕೃಷ್ಣೇಗೌಡ, ರವೀಂದ್ರ, ಶ್ರೀಧರ್, ತಾಲೂಕು ರೈತ ಸಂಘದ ಅಧ್ಯಕ್ಷ ಪುಟ್ಟೇಗೌಡ, ಕಾರ್ಯದರ್ಶಿ ಹೊನ್ನೇಗೌಡ, ಚಿಕ್ಕೋನಹಳ್ಳಿ ಚೇತನ್ ಕುಮಾರ್, ರೈತ ಮುಖಂಡರಾದ ಕರೋಟಿ ತಮ್ಮೇಗೌಡ, ರಘು, ಮುಂತಾದವರು ಉಪಸ್ಥಿತರಿದ್ದರು.
ವರದಿ :ಸಿ.ಆರ್.ಜಗದೀಶ್, ಕೆ ಆರ್ ಪೇಟೆ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795