ಗ್ಯಾಸ್ ಸಿಲಿಂಡರ್ ಸಾಗಣೆ ವೆಚ್ಚ ಕೊಡುವಂತಿಲ್ಲ: ಡಿಸಿ

 


ವಿಜಯ ಸಂಘರ್ಷ

ಹಾಸನ: ಮನೆ, ಮನೆಗೆ ಅಡುಗೆ ಸಿಲಿಂಡರನ್ನು ಸರಬರಾಜು ಮಾಡುವವರಿಗೆ ಸಾಗಾಣೆ ವೆಚ್ಚ ಕೊಡುವಂತಿಲ್ಲ. ಒತ್ತಾಯ ಮಾಡುವ ಆಟೋ ಚಾಲಕರ ವಿರುದ್ದ ದೂರು ದಾಖಲಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಆರ್. ಗಿರೀಶ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾತನಾಡಿ, ಅಡುಗೆ ಸಿಲಿಂಡರ್ ಯಾವುದೇ ಕಂಪನಿಯದಾಗಿರಲಿ ಸಾರ್ವಜನಿಕರು ಬುಕ್ ಮಾಡಿದಾಗ ಮನೆಗೆ ಉಚಿತವಾಗಿ ತಲುಪಿಸುವ ಜವಾಬ್ದಾರಿ ಕಂಪನಿಯದ್ದೇ ಆಗಿರುತ್ತದೆ. ಆದ್ದರಿಂದ ಗ್ರಾಹಕರು ಬಿಲ್‌ಮೊತ್ತ ಪಾವತಿಸಿದರೆ ಸಾಕು ಎಂದು ಸ್ಪಷ್ಟಪಡಿಸಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು