ವಿಜಯ ಸಂಘರ್ಷ
ತೀರ್ಥಹಳ್ಳಿ: ಕುಂಭ ದ್ರೋಣ
ಮಳೆಯ ರೌದ್ರ ನರ್ತನಕ್ಕೆ ಮಲೆನಾಡು ತತ್ತರಿಸಿದ್ದು ತುಂಗಾ ನದಿಯ ಪಾತ್ರದ ಕೆಲವೊಂದು ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದೆ.
ಜೀವನದಿ ತುಂಗಾನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ಪುರಾಣ ಪ್ರಸಿದ್ಧ ರಾಮ ಮಂಟಪ ಕೆಲವೇ ಗಂಟೆಗಳಲ್ಲಿ ಮುಳುಗುವ ಹಂತಕ್ಕೆ ತಲುಪಿದೆ. ವರುಣನ ಆರ್ಭಟಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಮಲೆನಾಡಿನ ಕೆಲವು ಭಾಗಗಳು ಸಂಪೂರ್ಣ ಜಲಾವೃತವಾಗಿದ್ದು ಪಟ್ಟಣದ ಬಾಳೇಬೈಲು ಸಮೀಪ ಮಾರುತಿ ಶೋರೂಂ, ವೈಶಾಲಿ ಹೋಟೆಲ್ ಹಾಗೂ ಅಕ್ಕಪಕ್ಕದ ಮಳಿಗೆಗಳು ನೀರಿನಿಂದ ಜಲಾವೃತವಾಗಿದೆ. ತಾಲೂಕಿನಾದ್ಯಂತ ಎಲ್ಲೆಡೆ ವಿದ್ಯುತ್ ಇಲ್ಲದೇ ಜನರು ಪರಿತಪಿಸುವಂತಾಗಿದೆ.
✍🏻: ರಶ್ಮಿ ಶ್ರೀಕಾಂತ್ ನಾಯಕ್
ತೀರ್ಥಹಳ್ಳಿ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795