ಸಾಗರದಲ್ಲಿ ಮಳೆಯಬ್ಬರ ಸಂತ್ರಸ್ತರನ್ನು ಗಂಜಿ ಕೇಂದ್ರಕ್ಕೆ ಶಿಫ್ಟ್ ಮಾಡಲು ಚಿಂತನೆ

 


ವಿಜಯ ಸಂಘರ್ಷ

ಸಾಗರ : ಕಳೆದ ಮೂರ್ನಾಲ್ಕು  ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರೋ ಮಳೆಯ ಪರಿಣಾಮ ಮಲೆನಾಡು ಪ್ರದೇಶಗಳಲ್ಲಿ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ.

ಸಾಗರ ನಗರ ಪ್ರದೇಶ ಸೇರಿಂದಂತೆ ತಾಲ್ಲೂಕಿನ ಹಲವು ಗ್ರಾಮಗಳು ಮಳೆಯ ಪ್ರಭಾವ ಹೆಚ್ಚಳವಾಗಿದೆ.  ಇದರಿಂದ ತಾಲ್ಲೂಕು ಆಡಳಿತ ನಗರದ ಗಾಂಧಿ ಮೈದಾನದಲ್ಲಿ ಪುನರ್ವಸತಿ ಕೇಂದ್ರಗಳ ನಿರ್ಮಾಣ ಮಾಡಿದೆ. ಈ ಹಿನ್ನೆಲೆ ಸಂತ್ರಸ್ಥರಿಗೆ ನಗರ ಸಭೆಯ ವತಿಯಿಂದ  ಪುನರ್ವಸತಿ ಕೇಂದ್ರಗಳಿಗೆ ಕರೆತರಲಾಗುವುದು ಎಂದು ತೀಳಿಸಲಾಗಿದೆ.

ಇನ್ನೂ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯಿತ್ತಿರೋ ಮಳೆ ಯಿಂದ ಎಷ್ಟರಮಟ್ಟಿಗೆ ಹಾನಿಯುಂಟು ಮಾಡಿದೆ ಎಂಬುದರ ಬಗ್ಗೆ ಅಧಿಕಾರಿ ಗಳು ಮಾಹಿತಿಯನ್ನ ಕಲೆಹಾಕುತ್ತಿದ್ದು ಅತಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಬೇಕಾಗುವ ಇನ್ನಷ್ಟು ಅನುಕೂಲಗಳನ್ನ ನೀಡುವ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ತಾಲ್ಲೂಕು ಆಡಳಿತ ಮಾಹಿತಿಯನ್ನ ನೀಡಿದೆ. ಇನ್ನೂ ಮಳೆಯಿಂದ ಹಾನಿಗೋಳಗಾಗಿರೋ ಸ್ಥಳಗಳಿಗೆ ಶಾಸಕ ಹರತಾಳು ಹಾಲಪ್ಪ ಬೇಟಿ ನೀಡಿದ್ದು ಸಂತ್ರಸ್ಥರಿಗೆ ಸಾಂತ್ವಾನ ಹೇಳುವುದರ ಜೊತೆಯಲ್ಲಿ ಜನರಿಗೆ ತಕ್ಷಣಕ್ಕೆ ಬೇಕಾಗುವ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು