ಮೈಕ್ರೋಫೈನಾನ್ಸ್ ಗಳಿಂದ ಮಹಿಳೆಯರಿಗೆ ಕಿರುಕುಳ : ಶಶಿಕುಮಾರ್ ಗೌಡ ಆರೋಪ

 


ವಿಜಯ ಸಂಘರ್ಷ

ಭದ್ರಾವತಿ : ಧರ್ಮಸ್ಥಳ ಸಂಘ ಹೊರತುಪಡಿಸಿ ಉಳಿದ ಮೈಕ್ರೋಫೈನಾನ್ಸ್ ಗಳಿಂದ ಸಾರ್ವಜನಿಕರಿಗೆ ತೊಂದರೆ ಹಾಗೂ ಪುರಾಣ ಪ್ರಸಿದ್ಧ ಕಲ್ಲಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದ ಮೂಲ ಸೌಕರ್ಯ ಮಾಡದೇ ಇರುವುದನ್ನು ಖಂಡಿಸಿ ಮಿನಿ ವಿಧಾನ ಸೌಧ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ  ಪ್ರತಿಭಟನೆ ನಡೆಸಿದರು.

ಕೊರೊನದಿಂದ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದ್ದು ದೇಶದ ಬಡ ನಾಗರಿಕರು ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಧರ್ಮಸ್ಥಳದ “ವೀರೇಂದ್ರ ಹೆಗಡೆ ಯವರು ಗ್ರಾಮಾಭಿವೃದ್ಧಿ ಯೋಜನೆಯಡಿ ಸಾಲ ತೆಗೆದುಕೊಂಡ ಬಡ ಮಹಿಳೆಯರಿಗೆ ಸಾಲ ಹಿಂತಿರುಗಿಸಲು ಕೆಲ ತಿಂಗಳು ಕಾಲ ಸಮಯಾವಕಾಶ ನೀಡಿದ್ದು ಉಳಿದಂತೇ ಇರುವ ಮೈಕ್ರೋಫೈನಾನ್ಸ್ ಸಂಘಗಳು ತಮ್ಮ ಸಂಸ್ಥೆಯಿಂದ ಸಾಲ ಪಡೆದ ಮಹಿಳೆಯರಿಗೆ ಸಾಲ ಮರುಪಾವತಿಸಲು ಸಮಯಾವಕಾಶ ನೀಡದೆ ಹಗಲು ರಾತ್ರಿ ಬಡ ಮಹಿಳೆಯರ ಮನೆಗೆ ಹೋಗಿ ಸಾಲ ಹಿಂತಿರುಗಿಸುವಂತೆ ಒತ್ತಾಯ ಮಾಡುತ್ತಿದ್ದು ಖಂಡನೀಯ, ಈ ಎಲ್ಲ ಮೈಕ್ರೋ ಫೈನಾನ್ಸ್ ಗಳು ಪಡೆದಿರುವ ಸಾಲಕ್ಕೆ ಸಮಯ ನೀಡಲು ಆದೇಶಿಸುವಂತೆ ತಹಸೀಲ್ದಾರ್‌ ಮೂಲಕ ಒತ್ತಾಯಿಸಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು