ಗರ್ಭಿಣಿರು ಕೊರೋನಾ ವ್ಯಾಕ್ಸಿನ್ ಪಡೆದುಕೊಳ್ಳಲು ಅರ್ಹರು

 


ವಿಜಯ ಸಂಘರ್ಷ

ಗರ್ಭಿಣಿಯರು ಕೂಡ ಕೊರೋನಾ ವ್ಯಾಕ್ಸಿನ್ ಪಡೆದುಕೊಳ್ಳಲು ಅರ್ಹರು ಎಂದು ಕೇಂದ್ರ ಆರೋಗ್ಯ ಮತ್ತು ಮಹಿಳಾ ಕಲ್ಯಾಣ ಇಲಾಖೆ ತಿಳಿಸಿದೆ.

ಗರ್ಭಿಣಿಯರಿಗೆ ವ್ಯಾಕ್ಸಿನ್ ನೀಡಲು ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್​ ಆನ್ ಇಮ್ಯುನೇಷನ್ ( NTAGI) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದೀಗ ಎನ್​ಟಿಎಜಿಐ ಶಿಫಾರಸನ್ನ ಕೇಂದ್ರ ಸರ್ಕಾರ ಪುರಸ್ಕರಿಸಿದ್ದು, ಗರ್ಭಿಣಿಯರಿಗೆ ವ್ಯಾಕ್ಸಿನ್ ನೀಡಬಹುದು ಅಂತಾ ಹೇಳಿದೆ.

ಗರ್ಭಿಣಿಯರು ಇಂದಿನಿಂದ ವ್ಯಾಕ್ಸಿನ್​​ಗಾಗಿ CoWin ಆಯಪ್​​ನಲ್ಲಿ ನೊಂದಣಿ ಮಾಡಿಕೊಳ್ಳಬಹುದು ಅಥವಾ ಹತ್ತಿರದ ವ್ಯಾಕ್ಸಿನೇಷನ್ ಸೆಂಟರ್​ಗೆ ಬಂದು ಲಸಿಕೆಯನ್ನ ಹಾಕಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಜೊತೆಗೆ ಗರ್ಭಿಣಿಯರಿಗೆ ವ್ಯಾಕ್ಸಿನೇಷನ್ ನೀಡುವ ಮುನ್ನ ಕೆಲವೊಂದಿಷ್ಟು ಗೈಡ್​ಲೈನ್ಸ್ ಫಾಲೋ ಮಾಡಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಕೌನ್ಸೆಲಿಂಗ್ ಕಿಟ್​​, ಎಫ್​ಎಲ್​​ಡಬ್ಲ್ಯೂ, ಐಇಸಿ ಮೆಟಿರಿಯಲ್​​ಗಳನ್ನ ಒಳಗೊಂಡಂತೆ ಒಂದಿಷ್ಟು ಸೂಚನೆಯನ್ನ ಕೇಂದ್ರ ಸರ್ಕಾರ ನೀಡಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು