ಬೆಲೆ ಏರಿಕೆ ವಿರೋಧಿಸಿ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

 


ವಿಜಯ ಸಂಘರ್ಷ

ಕೆ.ಆರ್. ಪೇಟೆ : ಪೆಟ್ರೋಲ್ ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಇಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೈಕಲ್ ಜಾತಾ ಪ್ರತಿಭಟನೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಸೈಕಲ್ ಜಾಥಾ ತಹಸಿಲ್ದಾರ್ ಕಚೇರಿವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರೋಧಿ ಘೋಷಣೆಗಳನ್ನು ಕೂಗುತ್ತಾ  ನೂರಾರು ಸಂಖ್ಯೆಯಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ನಂತರ ಮನವಿ ಪತ್ರವನ್ನು  ಶಿರಸ್ತೆದಾರ್ ಚಂದ್ರಿಕಾ ಅವರ ಮೂಲಕ ಸರ್ಕಾರಕ್ಕೆ ನೀಡಿದರು.



ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಬಿಜೆಪಿ ದುರಾಡಳಿತದಿಂದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ತಾರಕಕ್ಕೇರುತ್ತಿದ್ದು ಸಾಮಾನ್ಯ ಜನರು ಬದುಕು ನಡೆಸುವುದು ಕಷ್ಟವಾಗಿದೆ. ಇದರ ನಡುವೆ ಡೀಸೆಲ್ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಯು ಎಗ್ಗಿಲ್ಲದೆ  ಏರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ಹತೋಟಿಗೆ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆಪ ಮಾಡಿಕೊಂಡು ಹಣದ ಲೂಟಿ ಮಾಡುತ್ತಿದ್ದಾರೆ .ಈ  ದೇಶದ ಇತಿಹಾಸದಲ್ಲಿ ನರೇಂದ್ರ ಮೋದಿಯಂತ ಸುಳ್ಳು ಹೇಳುವ ಪ್ರಧಾನಿ ನಾವು  ಇಲ್ಲಿವರೆಗೂ ನೋಡಿಲ್ಲ ಎಂದು  ಹರಿಹಾಯ್ದರು.

ಈ ಸಂದರ್ಭದಲ್ಲಿ  ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್,  ತಾಲೂಕು  ಕಾಂಗ್ರೆಸ್ ವೀಕ್ಷಕರಾದ ಕೊಳ್ಳೇಗಾಲದ ಮಾಜಿ ಶಾಸಕ ಬಾಲರಾಜ್, ಮಾಜಿ ಶಾಸಕ ಬಿ.ಪ್ರಕಾಶ್,ರಾಜ್ಯ ಮೂಲ ಸೌಕರ್ಯ ಹಾಗೂ ಒಳಚರಂಡಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಎಂ ಡಿ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರಕುಮಾರ್, ಕಿಕ್ಕೇರಿ ಸುರೇಶ್ ಜಿ.ಪಂ.ಮಾಜಿ‌ ಸದಸ್ಯ ಕೆ.ದೇವರಾಜು,ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ರವೀಂದ್ರಬಾಬು, ಸೌಭಾಗ್ಯ ಉಮೇಶ್,ಸುಗಣ, ರಮೇಶ್,ಹಿರಿಯ ಮುಖಂಡ ಬಸ್ತಿರಂಗಪ್ಪ,ಪಿ ಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಹರಳಹಳ್ಳಿ ವಿಶ್ವನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿಪುರ ಪ್ರಸನ್ನಕುಮಾರ್, ಸಿ.ಬಿ. ಚೇತನಕುಮಾರ್, ಅಕ್ಕಿಹೆಬ್ಬಾಳು ದಿವಾಕರ್ ಮುಖಂಡರಾದ  ಚೇತನಾ ಮಹೇಶ್,ಬಸ್ತಿ ಕೃಷ್ಣೇಗೌಡ, ರಾಜಯ್ಯ ಮತ್ತಿತರರಿದ್ದರು.

ವರದಿ : ಸಿ ಆರ್ ಜಗದೀಶ್, ಕೆ.ಆರ್ ಪೇಟೆ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು