ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

 


ವಿಜಯ ಸಂಘರ್ಷ

ಭದ್ರಾವತಿ : ಕೇಂದ್ರ ಸರ್ಕಾರ ವಿದ್ಯುತ್ ದರ, ಅಡುಗೆ ಎಣ್ಣೆ, ರಸಗೊಬ್ಬರ ಬೆಲೆ ಪೆಟ್ರೋಲ್, ಡೀಸೆಲ್, ಜೀವನ ಅವಶ್ಯಕ ಅಗತ್ಯವಸ್ತುಗಳ ಬೆಲೆಗಳ ಹೆಚ್ಚಳದಿಂದ ಶ್ರೀ ಸಾಮಾನ್ಯ ಹಾಗೂ ಮಧ್ಯಮ ವರ್ಗದವರ ಜನಜೀವನ ಅಸ್ತವ್ಯಸ್ತ ಗೊಳಿಸಿ ಬೀದಿಗೆ ತಳ್ಳಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾದಳ ಆರೋಪಿಸಿ ಇಂದು ಮಿನಿ ವಿಧಾನ ಸೌಧ ಮುಂಭಾಗ ಪ್ರತಿಭಟನೆ ನಡೆಸಿತು.

ಮೊದಲನೇ ಮತ್ತು ಎರಡನೇ ಅಲೆಗಳ ಹರಡುವಿಕೆ ನಿಯಂತ್ರಣಗೊಳಿಸಲು ಕೇಂದ್ರ ಸರ್ಕಾರ ವ್ಯಾಪಕ ವಿಧಿಸಲಾದ ಲಾಕ್ ಡೌನ್  ಬಾಧಿತರಾಗಿ ಸಂಕಷ್ಟ ದಿಂದ ರಾಜ್ಯದ ಜನತೆ ಬಳಲುತ್ತಿರುವ ಸಮಯದಲ್ಲಿ ಜನರ ಬದುಕಿಗೆ ಬರೇ ಎಳೆದಿದೆ. ಮೇ 4 ರಿಂದ ಇಂದಿನ ವರೆವಿಗೂ ಸುಮಾರು 25 ಕ್ಕೂ ಹೆಚ್ಚು ಭಾರಿ ತೈಲ ಬೆಲೆ ಏರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿಯುತ್ತಿದ್ದರು, ವಿಧಿಸಿ ಅಬಕಾರಿ ಶುಲ್ಕಹೆಚ್ಚಿಸಿದೆ ಎಂದು ಆರೋಪಿಸಿದರು.

ಬೆಲೆ ಏರಿಕೆ ಹಿಂಪಡೆಯಲು ಹಾಗೂ ಕೊರೋನಾ ಸೋಂಕಿನಿಂದ ಸಾವಿಗೀಡಾದ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಆರ್. ಕರುಣಾ ಮೂರ್ತಿ, ಮುಖಂಡರಾದ ಮಾಜಿ ಶಾಸಕರ ಪತ್ನಿ ಶಾರದಾ ಅಪ್ಪಾಜಿ, ನಗರಸಭಾ ಸದಸ್ಯ ಬಸವರಾಜ್ ಅನೆಕೊಪ್ಪ, ಮಾಜಿ ಸದಸ್ಯರಾದ ಶಿವರಾಜ್, ಗುಣಶೇಖರ್, ಬದರಿನಾರಾಯಣ, ಮುಖಂಡರಾದ ಎಸ್. ಕುಮಾರ್, ಜೆ.ಪಿ. ಯೋಗೀಶ್, ಅಶೋಕ್, ಉಮೇಶ್, ಗೊಂದಿ ಜಯರಾಮ್, ವೆಂಕಟೇಶ್ ಉಜ್ಜಿನಿಪುರ, ಡಾರ್ವಿನ್, ಡಿ.ಟಿ. ಶ್ರೀಧರ್, ನಂಜುಂಡೇಗೌಡ ಸೇರಿದಂತೆ ಅನೇಕರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು