ಬಚ್ಚನ್ ಬಂಗಲೆ ಡೆಮಾ ಲಿಶ್ ಗೆ ಮುನಾಗಿದೆಯೇ ಬಿಎಂಸಿ..?


ವಿಜಯ ಸಂಘರ್ಷ

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪ್ರತೀಕ್ಷ ಬಂಗಲೆಯ ಒಂದು ಭಾಗವನ್ನು ಕೆಡವಲು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ -ಬಿಎಂಸಿ ನಿರ್ಧರಿಸಿದೆ.

ರಸ್ತೆ ಅಗಲೀಕರಣಕ್ಕಾಗಿ ಬಚ್ಚನ್ ಬಂಗಲೆಯ ಒಂದು ಭಾಗ ನೆಲಸಮ ವಾಗಲಿದೆ. ಸಂತ ಜ್ಞಾನೇಶ್ವರ ಮಾರ್ಗ್ ರಸ್ತೆಯಲ್ಲಿ ಈ ಮನೆಯದ್ದು. ಈ ರಸ್ತೆಯನ್ನು ಅಗಲೀಕರಣ ಮಾಡಲು ಮುಂಬೈ ಮುನ್ಸಿಪಲ್ ಕಾರ್ಪೋ ರೇಷನ್ ಮುಂದಾಗಿದೆ.

ಈ ಕುರಿತು ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಮಿತಾಭ್ ಮೊಟ್ಟ ಮೊದಲಿಗೆ ಖರೀದಿಸಿದ ಬಂಗಲೆ ಇದಾಗಿದ್ದು, ಮುಂಬೈನ ಜುಹು ಪ್ರದೇಶದಲ್ಲಿದೆ.ರಸ್ತೆ ಅಗಲೀಕರಣ ಮಾಡುವುದಾಗಿ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ 2017ರಲ್ಲಿ ನೋಟಿಸ್ ನೀಡಲಾಗಿತ್ತು. ಅಮಿತಾಬ್ ಬಚ್ಚನ್ ಜೊತೆಗೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಪಂಕಜ್ ಬಾಲಾಜಿ ಮನೆ ಸೇರಿದಂತೆ ಒಟ್ಟು 7 ಮಂದಿ ಸೆಲೆಬ್ರಿಟಿಗೆ ನೋಟಿಸ್ ನೀಡಲಾಗಿತ್ತಾದರೂ, ಆಗ ಅಗಲೀಕರಣ ಕಾರ್ಯ ನಡೆದಿರಲಿಲ್ಲ.

ಈ ಬಗ್ಗೆ ಮುನ್ಸಿಪಲ್ ಕೌನ್ಸಿಲರ್ ಪರ ವಕೀಲ ತುಲಿಪ್ ಬ್ರಿಯಾನ್ ಮಿರಾಂಡ, “ಬಿಎಂಸಿ 2017ರಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ನೋಟಿಸ್ ನೀಡಿದ್ದು, ರಸ್ತೆ ಅಗಲೀಕರಣ ಯೋಜನೆಗೆ ಯಾವುದೇ ಮೇಲ್ಮನವಿ ಅಗತ್ಯವಿಲ್ಲ” ಎಂದಿದ್ದಾರೆ. ನಟಿ ಕಂಗನಾ ರಣಾವತ್ ಅವರ ಬೃಹತ್ ಕಚೇರಿಯ ಒಂದು ಭಾಗವನ್ನು ಕಳೆದ ವರ್ಷ 2020ರಲ್ಲಿ ಮುಂಬೈ ಮಹಾನಗರ ಪಾಲಿಕೆ ನೆಲಸಮ ಮಾಡಿತ್ತು. ಇದರ ವಿರುದ್ಧ ಕಂಗನಾ ಹೈ ಕೋರ್ಟ್ ಮೆಟ್ಟಿಲೇರಿದ್ದು, ನೆಲಸಮ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಅಮಿತಾಭ್ ತಮ್ಮ ಪ್ರೀತಿಯ ಬಂಗಲೆಯನ್ನು ಸಂಪೂರ್ಣವಾಗಿ ಉಳಿಸಿಕೊಳ್ಳುವರೇ, ಭಾಗಶಃ ನೆಲಸಮಕ್ಕೆ ಸಮ್ಮತಿ ಸೂಚಿಸುವರೇ ಕಾದುನೋಡಬೇಕಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು