ವಿಸಿಟಿಂಗ್ ಕಾರ್ಡ್ ಪದಾಧಿಕಾರಿಗಳು ಬೇಡ: ಹೆಚ್‌.ಡಿ.ಕುಮಾರ ಸ್ವಾಮಿ

 


ವಿಜಯ ಸಂಘರ್ಷ



ಬೆಂಗಳೂರು: ಜೆಡಿಎಸ್‌ಗೆ ವಿಸಿಟಿಂಗ್ ಕಾರ್ಡ್ ಪದಾಧಿಕಾರಿಗಳು ಬೇಡ, ಪಕ್ಷ ಕಟ್ಟುವವರು ಬೇಕು ಎಂದು ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದು, ಹಳ್ಳಿ ಫೈಟ್  ಹಾಗೂ ಬಿಬಿಎಂಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸ್ಥಳೀಯ ಚುನಾವಣೆಯನ್ನು ಆಧಾರವಾಗಿಟ್ಟು ಕೊಂಡು ಪಕ್ಷ ಸಂಘಟನೆಗೆ ತಾಲೀಮು ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರ ಸ್ವಾಮಿ ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿದ್ದು,ಕಳೆದ ಎರಡು ದಿನಗಳಿಂದ ಜಿಲ್ಲಾವಾರು ಸಭೆ ನಡೆಸಲಾಗುತ್ತಿದ್ದು, ಮೊದಲ ದಿನ ಬೆಳಗಾವಿ,ಚಿಕ್ಕೋಡಿ, ಬಿಜಾಪುರ ಹಾಗೂ ಬಾಗಲಕೋಟೆ,
ನಿನ್ನೆ ಗುಲ್ಬರ್ಗಾ ಬೀದರ್ ಕೊಪ್ಪಳ ರಾಯಚೂರು ಜಿಲ್ಲೆಗಳ ಸಭೆ ಮಾಡಿದ್ದೇನೆ.ಕೊಪ್ಪಳದಲ್ಲಿ ಜೆಡಿಎಸ್ ಪಕ್ಷದವರು ಪಕ್ಷ ಬಿಟ್ಟುಹೋದ ನಂತರ ಪಕ್ಷದಲ್ಲಿ ಚಟುವಟಿಕೆ ಕಡಿಮೆಯಾಗಿತ್ತು. ಆದರೀಗ ಯುವಕರು, ವಕೀಲರು ಹಾಗೂ ಟಿಕೆಟ್ ವಂಚಿತರಾದವರು ಪಕ್ಷಕಟ್ಟಲೇಬೇಕೆಂದು ಬಂದಿದ್ದಾರೆ.



ಹೊರನೋಟಕ್ಕೆ ಜೆಡಿಎಸ್ ಮುಗಿದೇ ಹೋಯಿತೆನ್ನುವ ಬಿಜೆಪಿಯ ಭಾವನೆ ಸಫಲವಾಗದು. ಉಪಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ಹೊರನೋಟ ದಲ್ಲಿ ಜೆಡಿಎಸ್ ಮುಗಿದೇ ಹೋಯಿತೆಂ ದು ಬಿಂಬಿಸಿದರೂ ಕೂಡ ಜೆಡಿಎಸ್‌ ನಲ್ಲಿ ಈಗಲೂ ಸಹ ಪಕ್ಷದಲ್ಲಿ ನಿಷ್ಠಾಂವತರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ ಎಂದರು.

ಜೆಪಿ ಭವನದಲ್ಲಿ ಇಂದು  ಸುದ್ದಿಗಾರ ರೊಂದಿಗೆ ಮಾತನಾಡಿದ ಹೆಚ್‌ಡಿಕೆ, ಮುಂದಿನ ಸಾರ್ವತ್ರಿಕ ಚುನಾವಣೆಗೆ ತಾಲೂಕು, ಜಿಲ್ಲಾ ಹಾಗೂ ಬಿಬಿಎಂಪಿ ಚುನಾವಣೆ ಮುಖ್ಯವಾಗಿದೆ.ಪಕ್ಷ ಸಂಘಟನೆಗೆ ಸಮರ್ಥ ಪದಾಧಿಕಾರಿ ಗಳನ್ನು ಆಯ್ಕೆಮಾಡಲಾಗುತ್ತಿದ್ದು, ನಮಗೆ ಬರೀ ವಿಸಿಟಿಂಗ್ ಕಾರ್ಡ್ ಹೊಂದಿರುವವರ ಅಗತ್ಯವಿಲ್ಲ.
ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಪಕ್ಷ ಕಟ್ಟುವ ಪದಾಧಿಕಾರಿಗಳ ಅಗತ್ಯವಿದೆ ಎಂದರು.

ಕಾರ್ಪೋರೇಷನ್ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು,ಈಗಿನ‌ ರಾಜಕೀಯಕ್ಕೆ ತಕ್ಕಂತೆ ನಮಗೆ ಪ್ರೊಪೇಷನಲ್‌ಗಳು ಸಲಹೆಗಾರರು ಬೇಕಾಗಿದ್ದಾರೆ.ಪ್ರಾದೇಶಿಕ ಅಸ್ಮಿತೆ ಇಟ್ಟುಕೊಂಡು ಚುನಾವಣೆಗೆ ಹೋಗಬೇಕಿದೆ.ಕಾರ್ಯಕರ್ತರಲ್ಲಿಯೇ ಪಕ್ಷ ಸಂಘಟನೆಯ ಹುಮ್ಮಸ್ಸಿದೆ.
ಕರ್ನಾಟಕ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರ ಪ್ರಾದೇಶಿಕ ಸರ್ಕಾರದ ಅವಶ್ಯಕತೆಯಿದೆ.

ದೆಹಲಿಯಿಂದ ಆಡಳಿತ ನಡೆಸುವ ಸರ್ಕಾರ ನಮಗೆ ಬೇಕಿಲ್ಲ. ಹೀಗಾಗಿ ಪ್ರಾದೇಶಿಕ ಅಸ್ಮಿತೆಯನ್ನಿಟ್ಟುಕೊಂಡು “ಕರ್ನಾಟಕದ ಆಡಳಿತ ಕನ್ನಡಿಗರಿಂದ ಲೇ” ಎಂಬ ಘೋಷವಾಕ್ಯ ದೊಂದಿಗೆ ಚುನಾವಣೆಗೆ ಜೆಡಿಎಸ್ ಹೋಗಲಿದೆ.
ಅದಕ್ಕಾಗಿ ಪಂಚ ಕಾರ್ಯಕ್ರಮಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದು,ಬರುವ ಜನವರಿಯಿಂದ ಪಂಚತತ್ವ ಕಾರ್ಯಕ್ರಮಗಳನ್ನು ಪ್ರತಿಹಳ್ಳಿಹಳ್ಳಿಗೆ ಕೊಂಡೊಯ್ಯಲಾಗುವುದು ಎಂದು ಹೆಚ್ಡಿಕೆ ವಿವರಿಸಿದರು.

ಸಿಎಂ ದೆಹಲಿ ಭೇಟಿ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದೊಡ್ಡದೊಡ್ಡ ಆರುಬ್ಯಾಗುಗಳನ್ನು ಇಟ್ಟುಕೊಂಡು ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ಜೊತೆ ವಿಶೇಷ ವಿಮಾನದಲ್ಲಿ ಪ್ರಧಾನಿಗಳನ್ನು ವರಿಷ್ಠರ ಭೇಟಿಗೆ ಹೋಗಿದ್ದಾರೆ.ಅವರಿಬ್ಬರೇ ದೆಹಲಿಗೆ ಹೋದರೋ ಅಥವಾ ಬ್ಯಾಗುಗಳೇ ಹೋದವೋ? ರಾಜ್ಯದ ಬಗ್ಗೆ ಚರ್ಚೆ ಮಾಡಲು ಯಡಿಯೂರಪ್ಪ ವಿಷಯಗಳನ್ನು ಆರು ಬ್ಯಾಗುಗಳಲ್ಲಿ ತೆಗೆದುಕೊಂಡು ಹೋದರೋ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು