ವಿಜಯ ಸಂಘರ್ಷ
ಅಥಣಿ:ರಾಜ್ಯಾದ್ಯಂತ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬ ಆಚರಿಸುತ್ತಾ ಬಂದಿದ್ದು, ಈ ವರ್ಷವೂ ಬಕ್ರೀದ್ ಹಬ್ಬವನ್ನು ಆಚರಿಸುವ ಪ್ರಯುಕ್ತ ಇಂದು ಪೋಲಿಸ್ ಠಾಣೆಯ ಸಮುದಾಯ ಭವನದಲ್ಲಿ ಬಕ್ರೀದ್ ಹಬ್ಬದ ಶಾಂತಿ ಸಭೆ ನಡೆಯಿತು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಶಂಕರಗೌಡ ಬಸಗೌಡರ ಮಾತನಾಡಿ, ಜನರು ಬದಲಾದ ಕಾಲಕ್ಕೆ ಬದಲಾವಣೆ ಆಗಬೇಕಿದೆ.ಕೊವಿಡ್ ಸಮಯದಲ್ಲಿ ಜೇಬಿನಲ್ಲಿ ದುಡ್ಡು ಇಲ್ಲದೆ ಇದ್ದರೂ ಮಾಸ್ಕ ಧರಿಸಬಬೇಕಾಗಿದೆ.
ಮೊದಲ ಅಲೆಯ ಬಳಿಕ ಜನರು ಮೈ ಮರೆತ ಪರಿಣಾಮವಾಗಿ ಎರಡನೆಯ ಅಲೆಯಲ್ಲಿ ತೀವ್ರ ಸಾವು ನೋವು ಗಳಾಗಿವೆ ಗಡ್ಡೇಕರ ಅವರ ನಿಧನ ನೋವು ತಂದಿದೆ. ಪೋಲಿಸ್ ಇಲಾಖೆಯ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ಅಥಣಿಗೆ ಸಬ್ ಜೈಲ್ ಬೇಕೆಂದು ಪ್ರಯತ್ನ ಮಾಡಿದ್ದರು ಅಂತಹ ವ್ಯಕ್ತಿಗಳು ನೆನಪಿನಲ್ಲಿ ಉಳಿಯುತ್ತಾರೆ. ಸರ್ಕಾರದ ಸುತ್ತೋಲೆ ಪ್ರಕಾರ ಸಭೆ ಸಮಾರಂಭಗಳಲ್ಲಿ ಜನರಿಗೆ ಮಿತಿ ಇದೆ. ಬಕ್ರೀದ್ ಹಬ್ಬ ಆಚರಣೆ ಸರಳವಾಗಿ ಆಚರಿಸಿ ಜನರು ಗುಂಪುಗೂಡುವದು ಬೇಡ. ಸಾಮಾಜಿಕ ಅಂತರದ ಅಡಿಯಲ್ಲಿ ಹತ್ತು ಜನ ಪ್ರಾರ್ಥನೆ ಸಲ್ಲಿಸಬಹುದು ಈಗಾಗಲೇ ಚಿಂಚಲಿ,ಕೋಕಟ ನೂರ,ಐನಾಪುರ, ಅಥಣಿ ಸಿದ್ದೇಶ್ವರ ಜಾತ್ರೆಗಳು ರದ್ದಾಗಿದ್ದನ್ನು ಮರೆಯು ವಂತಿಲ್ಲ.ಆದ್ದರಿಂದ ಮುಸ್ಲಿಂ ಸಮಾಜ ಬಾಂಧವರು ಸಹಕರಿಸಬೇಕು ಎಂದರು
ಮುಖಂಡ ಅಸ್ಲಂ ನಾಲಬಂದ ಮಾತನಾಡಿ,ನಾವು ಬಕ್ರೀದ್ ಹಬ್ಬವನ್ನು ಕೊರೊನಾ ನಿಯಮ ಪಾಲನೆ ಮಾಡಿ ಆಚರಿಸಲು ನಾವು ಬದ್ದರಾಗಿದ್ದೇವೆ. ಹಾಗೆಯೇ ಪ್ರತಿಯೊಬ್ಬರು ಸರ್ಕಾರದ ಆಜ್ಞೆ ಪಾಲನೆ ಮಾಡಬೇಕು. ಈ ಬಾರಿ ಸರಳವಾಗಿ ಆಚರಿಸಲು ಸಹಕರಿಸಬೇಕು ಎಂದರು
ಡಿವೈಎಸ್ಪಿ ಎಸ್.ವಿ.ಗಿರೀಶ, ಪಿಎಸ್ಐ ಕುಮಾರ ಹಾಡಕಾರ,ಸೈಯ್ಯದ ಅಮೀನ ಗದ್ಯಾಳ, ಖಾದರಸಾಬ ಚೌಧರಿ,ಅಯಾಜ್ ಮಾಸ್ಟರ್,ಶಬ್ಬೀರ ಸಾತಬಚ್ಚೆ,ಉಮರಸಯ್ಯದ ಹುಲಗಬಾಳಿ,ಮುಕ್ತಿ ಹಬೀಬುಲ್ಲಾ, ಮಹಾಂತೇಶ ಬಾಡಗಿ,ಮಂಜು ಹೂಳಿಕಟ್ಟಿ,ಪಂಡಿತ ನೂಲಿ,ಅಪ್ಪಾಸಾಬ ಪಟ್ಟಣ,ಬಾಬು ಗದ್ಯಾಳ,ಅಸ್ಲಂ ತಾಂಬೋಳಿ,ಅಬ್ಲುಲ್ ಆಸಂಗಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಕೆ.ಸಚಿನ್ ಅಥಣಿ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795
