ವಿಜಯ ಸಂಘರ್ಷ
ಭದ್ರಾವತಿ: ಖಾಸಗೀ ಶಾಲೆಗಳು ಹೆಚ್ಚು ಹಣವನ್ನು ವಸೂಲಾತಿ ಮಾಡುತ್ತಿದ್ದಾ ರೆಂದು ಆರೋಪಿಸಿ ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕ್ಷೇತ್ರ ಶಿಕ್ಷಣ ಅಧಿಕಾರಿ ಕಚೇರಿ ಹಾಗು ಮಿನಿವಿಧಾನ ಸೌಧ ಮುಂಭಾಗ ಪೀಸ್ ಇಳಿಸಿ ಅಭಿಯಾನದ ಕರಪತ್ರ ಹಿಡಿದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕೊರೋನಾದಿಂದ ಇಂದು ಜಗತ್ತು ತತ್ತರಿಸಿದೆ. ಮಧ್ಯಮವರ್ಗದವರ, ಬಡವರ ಆರ್ಥಿಕ ಸ್ಥಿತಿ ಚಿಂತಾಜನಕ ವಾಗಿದ್ದು, ಇಂಥಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ಸರಿಯಾದ ಕೊಠಡಿ ಪಿಠೋಪಕರಣ ಆಟದ - ಮೈದಾನ ಇಲ್ಲದೆ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ, ಇದರಿಂದ ಪೋಷಕರು ಖಾಸಗಿ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಖಾಸಗೀ ಶಾಲೆಯ ಆಡಳಿತ ಮಂಡಳಿ ಕೇಳಿದಷ್ಟು ಶುಲ್ಕ ಕೊಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಖಾಸಗಿ ಶಾಲೆಗಳ ಶುಲ್ಕವನ್ನು ಶೇಕಡ 30 ರಷ್ಟು ಕಡಿತಗೊಳಿಸಿ ಪೋಷಕರಿಗೆ ಅನುಕೂಲಗೊಳಿಸಿ ಹಂತ ಹಂತವಾಗಿ ಶುಲ್ಕ ಪಡೆಯಬೇಕು ಎಂದು ಆಗ್ರಹಿಸಿದರು.
ಶೀಘ್ರವಾಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಶೇ.30 ರಷ್ಟು ಶುಲ್ಕ ಕಡಿತಗೊಳಿಸಲು ಸೂಚಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರರು, ಖಾಸಗಿ ಶಾಲೆಗಳ ಆಡಳಿತ ವರ್ಗ, ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಹಾಗೂ ಪಕ್ಷದ ಪದಾಧಿಕಾರಿಗಳ ಜಂಟಿ ಸಭೆ ನಡೆಸಿ ಖಾಸಗಿ ಶಾಲೆಗಳ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರವಿಕುಮಾರ್, ಮಾಧ್ಯಮ ವಕ್ತಾರ ಅಬ್ದುಲ್ ಖದಿರ್ ಮುಖಂಡರಾದ ಎನ್.ಪಿ. ಜೋಸೆಫ್, ಇಬ್ರಾಹಿಂ ಖಾನ್, ಬಿ.ಕೆ. ರಮೇಶ್, ಜಾವೇದ್, ನಾಸಿಬ ಬೇಗಂ, ಬಸವಕುಮಾರ್,
ಪರಮೇಶ್ ನಾಯ್ಕ, ರೇಷ್ಮೆಭಾನು ಮತ್ತಿತರರು ಭಾಗವಹಿಸಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795