ವಿಜಯ ಸಂಘರ್ಷ
ಶಿಕಾರಿಪುರ: ಕಾಂಗ್ರೆಸ್, ಬಿಜೆಪಿ, ದಳ ಎಂದು ರಾಜಕೀಯ ಮಾಡಲು ನಾನು ಬಂದಿಲ್ಲ. ಲಂಬಾಣಿ ಜನತೆಗೆ ಮೂಲ ಭೂತ ಸೌಕರ್ಯಗಳ ಒದಗಿ ಕುಂದು ಕೊರೆತೆಗಳನ್ನು ಸರಿ ಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ತಾಲೂಕಿನ ಬೇಗೂರು ತಾಂಡದಲ್ಲಿಂದು ಲಂಬಾಣಿ ಜನರೊಂದಿಗೆ ಕುಂದುಕೊರತೆ ಗಳ ಕುರಿತು ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡಿ, ಲಂಬಾಣಿ ಜನಾಂಗ ವನ್ನು ಒಕ್ಕಲೇಬ್ಬಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
ಸಭೆಯಲ್ಲಿ ನೀವು ತಿಳಿಸಿರುವ ವಿಷಯಗಳನ್ನು ನಾವು ಬರೆದುಕೊಂಡು ಮುಂದಿನ ದಿನಗಳಲ್ಲಿ ಇದಕ್ಕೆ ನಮ್ಮ ನಾಯಕರು ಮುಖಂಡರು ಮುಂದಿನ ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯಲ್ಲಿ ಈ ಕುರಿತು ಪ್ರಕಟಿಸಿ ಈಡೇರಿ ಸುತ್ತೇವೆ ನುಡಿದಂತೆ ನಡೆಯುವ ಪಕ್ಷ ನಮ್ಮದು ಎಂದರು.
ಬಗರ ಹುಕುಂ ಭೂ ಮಂಜೂರಾತಿ ಬಗ್ಗೆ ರಾಷ್ಟಮಟ್ಟದ ಈ ವಿಷಯಗಳ ಕೇಂದ್ರ ಸರ್ಕಾರ ಒತ್ತಾಯ ಮಾಡುತ್ತೇವೆ. ಕಾಗೋಡು ತಿಮ್ಮಪ್ಪ ಅರಣ್ಯ ಭೂಮಿ ಯನ್ನು ಕಂದಾಯ ಭೂಮಿಯಾಗಿ ಮಾಡಿ ಗೇಣಿದಾರರಿಗೆ ಒದಗಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.
ಹೆಣ್ಣುಮಕ್ಕಳ ವಿದ್ಯಾಭ್ಯಾಸ ಉದ್ಯೋಗ ಸೃಷ್ಠಿ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಮಾಜದೊಂದಿಗೆ ನನ್ನ ಬಾಲ್ಯವನ್ನು ಕಳೆದಿದ್ದೇನೆ ನಿಮ್ಮ ಆಚಾರ ವಿಚಾರ ಸಂಕಷ್ಟದ ಅರಿವಿದೆ. ಮಲೆನಾಡು ಮಳೆ, ವಾತಾವರಣ , ಜೀವನ ಶೈಲಿ ಸಂಸ್ಕೃತಿ ಸಂಪತ್ತು ಉತ್ತಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರುದ್ರಪ್ಪ ಲಂಬಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಮಾಜಿ ಶಾಸಕ ಪ್ರಸನ್ನಕುಮಾರ್, ಎಂಎಲ್ ಸಿ ಪ್ರಸನ್ನ ಕುಮಾರ್, ತೀ.ನಾ.ಶ್ರೀನಿವಾಸ್, ಮಾಜಿ ಶಾಸಕ ಪ್ರಕಾಶ್ ರಾಥೋಡ್, ಶಿವಮೂರ್ತಿ ನಾಯ್ಕ್, ಕನಿರಾಮ್ ನಾಯ್ಕ್,ಮಾಜಿ ಎಂಎಲ್‌ಸಿ ಶಾಂತವೀರಪ್ಪ ಗೌಡ, ತಾಲೂಕ್ ಅಧ್ಯಕ್ಷ ಗೋಣಿ ಮಾಲತೇಶ್ ಮತ್ತಿತ್ತರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

