ವಿಜಯ ಸಂಘರ್ಷ
ಬೆಂಗಳೂರು: ಜೀರ್ಣಾಂಗ ರೋಗ ತಜ್ಞ ಡಾ ಮನೋಯಿಲ್ ಗಾಲ್ವೋ ಅವರು ಶಸ್ತ್ರಚಿಕಿತ್ಸೆ ಇಲ್ಲದೆ ತೂಕ ಇಳಿಸುವ ನೂತನ ಚಿಕಿತ್ಸಾ ವಿಧಾನದ ಬಗ್ಗೆ ರಾಜ್ಯದ ಜಠರ ಶಾಸ್ತ್ರಜ್ಞರುಗಳಿಗೆ ಇಂದು ತರಬೇತಿ ನೀಡಿದರು.
27 ರಿಂದ 35 ರ ವರೆಗಿನ ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವ ಜನರು ಸುಲಭವಾಗಿ ತಮ್ಮ ದೇಹದ ತೂಕವನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಈ ಚಿಕಿತ್ಸಾ ವಿಧಾನ ಸಹಕಾರಿಯಾಗಿದೆ. ಶಸ್ತ್ರಚಿಕಿತ್ಸೆ ಇಲ್ಲದ ವಿಶೇಷ ಎಂಡೋಸ್ಕೋಪಿಕ್ ಯಂತ್ರವನ್ನು ಬಳಸುವ ಮೂಲಕ ಹೊಟ್ಟೆಯ (ಜಠರದ) ಗಾತ್ರವನ್ನು ಕಡಿಮೆ ಮಾಡಲಾಗುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ. ಟ್ರಸ್ಟ್‌ವೆಲ್ ಆಸ್ಪತ್ರೆಯ ಗ್ಯಾಸ್ಟ್ರೋ ಸೈನ್ಸ್‌ಸ್ ವಿಭಾಗದ ಮುಖ್ಯಸ್ಥ ಡಾ ಮನೀಶ್ ಜೋಶಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಶ್ವದಾದ್ಯಂತ ಇಂತಹ 2000 ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಇದರಿಂದ ರೋಗಿಗಳಿಗೆ ಬಹಳಷ್ಟು ಅನುಕೂಲವಿದೆ. ಇದೊಂದು ಶಸ್ತ್ರಚಿಕಿತ್ಸೆ ಹೊರತಾದ ಚಿಕಿತ್ಸಾ ವಿಧಾನವಾಗಿದ್ದು, ಡೇ ಕೇರ್ ವಿಧಾನವಾಗಿದೆ.
ಬೊಜ್ಜಿನಿಂದ ಬಳಲುತ್ತಿರುವವರಿಗೂ ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಈ ವಿಧಾನದ ಸಂಶೋಧಕ ಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ: ಮೊನೊಯೀಲ್ ಗಾಲ್ವೋ ಅವರಿಂದ ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರೋ ಲೈಜಿಸ್ಟ್‌ಗಳು ತರಬೇತಿಯನ್ನು ಪಡೆದುಕೊಂಡಿರುವುದು ಸಂತಸದ ವಿಷಯವಾಗಿದೆ. ಈ ಚಿಕಿತ್ಸಾ ವಿಧಾನ ನಮ್ಮ ಟ್ರಸ್ಟ್‌ವೆಲ್ ಆಸ್ಪತ್ರೆಯಲ್ಲೂ ಲಭ್ಯವಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳ ಬಹುದಾಗಿದೆ ಎಂದು ಟ್ರಸ್ಟ್‌ವೆಲ್ ಹಾಸ್ಪಿಟಲ್ ನ ಸಿಎಂಡಿ ಡಾ. ಹೆಚ್ ವಿ ಮಧುಸೂಧನ್ ಹೇಳಿದರು.
ಪ್ರಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮೊನೊಯೀಲ್ ಗಾಲ್ವೋ ಹಾಗೂ ಇಂದೋರ್ ನ ಡಾ ಮೋಹಿತ್ ಭಂಡಾರಿ ರಾಜ್ಯದ 15 ಜಠರಶಾಸ್ತ್ರಜ್ಞ ವೈದ್ಯರುಗಳಿಗೆ ತರಬೇತಿ ನೀಡಿದರು.
ಮಾಹಿತಿಗಾಗಿ ಟ್ರಸ್ಟ್ ವೆಲ್ ಆಸ್ಪತ್ರೆಯ ಮಾರ್ಕೇಟಿಂಗ್ ವಿಭಾಗದ ಮುಖ್ಯಸ್ಥ ಆರ್.ಅಶೋಕ್ ಮೊಬೈಲ್ : 99004 42219 ಸಂಪರ್ಕಿಸಬಹುದು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795