ವಿಜಯ ಸಂಘರ್ಷ
ಭದ್ರಾವತಿ: ಕೃಷಿಕರು ಹಾಗೂ ಸ್ನೇಹ ಜೀವಿ, ಶಿಕ್ಷಕರೂ ಆಗಿದ್ದ ತಾಲ್ಲೂಕು ಹನುಮಂತಾಪುರ ಟಿ. ಎಂ ಹಾಲೇಶಪ್ಪ ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸಮುದಾಯ ವಿಚಾರ ವೇದಿಕೆಯ ರೂವಾರಿಗಳೂ ಆಗಿದ್ದ ಹಾಲೇಶಪ್ಪ ಅವರು ರೈತ ಹೋರಾಟಗಾರ ಚಂದ್ರಪ್ಪ ಹಾಗೂ ಶಿಕ್ಷಕ ಟಿ. ಎಂ. ಸಂಗಪ್ಪ ಅವರ ಸಹೋದರರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಇಂದು ಸಂಜೆ ನಾಲ್ಕರ ನಂತರ ಹನುಮಂತಾಪುರದಲ್ಲಿ ಅವರ ಅಂತಿಮ ದರುಶನಕ್ಕೆ ಅವಕಾಶ ನೀಡಲಾಗಿದೆ.
ಹಾಲೇಶಪ್ಪ ಅವರ ಅಕಾಲಿಕ ನಿಧನಕ್ಕೆ ಅವರ ಗೆಳೆಯರ ಬಳಗ ಕಂಬನಿ ಮಿಡಿದಿದೆ.