ಇಂದಿನಿಂದ ಶಾಲಾ ಕಾಲೇಜು ಆರಂಭದ ಪ್ರಕ್ರಿಯೆ ಉತ್ತಮ

 

ವಿಜಯ ಸಂಘರ್ಷ



ಬೆಂಗಳೂರು : ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಶಾಲಾ-ಕಾಲೇಜುಗಳು ಒಂದೂವರೆ ವರ್ಷದ ಬಳಿಕ ಇದೀಗ ಭೌತಿಕ ತರಗತಿಗಳನ್ನು (ಆ. 23) ಇಂದಿನಿಂದ  ಪ್ರಾರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.

ಬೆಂಗಳೂರು ಚಿತ್ರಣ
ಕರ್ನಾಟದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭವಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ನಗರದ ಮಲ್ಲೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು.

ಕಾಲೇಜಿನಲ್ಲಿ ಭೌತಿಕ ತರಗತಿ ಆರಂಭಕ್ಕೆ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ಈ ವೇಳೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಉಪಸ್ಥಿತರಿದ್ದರು.

ನಂತರ ಶಾಲೆ ಆರಂಭದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಲ್ಲೇಶ್ವರದ ನಿರ್ಮಲ ರಾಣಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದರು. ಆಫ್‌ಲೈನ್‌ ತರಗತಿ ಬೇಕಾ ಅಥವಾ ಆನ್‌ಲೈನ್ ಸಾಕಾ ಎಂಬ ಸಿಎಂ ಪ್ರಶ್ನೆಗೆ ವಿದ್ಯಾರ್ಥಿಗಳು ಆಫ್‌ಲೈನ್‌ ತರಗತಿ ಬೇಕು ಎಂದು ಪ್ರತಿಕ್ರಿಯಿಸಿದರು.

ಸುಮಾರು ಒಂದೂವರೆ ವರ್ಷ ಕೋವಿಡ್ ಸೋಂಕು ಕಾರಣಕ್ಕೆ ಶಾಲೆಗಳು ಬಂದ್ ಆಗಿದ್ದವು. ಆ ಸಂದರ್ಭದಲ್ಲಿ ಪರ್ಯಾಯ ಕ್ರಮದ ಮೂಲಕ ಶಿಕ್ಷಣ ಕೊಡಲಾಗಿದೆ. ವಿದ್ಯಾರ್ಥಿಗಳ ಜತೆ ಶಿಕ್ಷಣ ಇಲಾಖೆ ನಿರಂತರ ಸಂಪರ್ಕದಲ್ಲಿತ್ತು. ಶಿಕ್ಷಣ ಇಲಾಖೆ ಉತ್ತಮವಾದ ಕೆಲಸ ಮಾಡಿದೆ. ಇದೀಗ ಅಧ್ಯಯನ ಮಾಡಿ ತಜ್ಞರ ವರದಿ ಪಡೆದು ಶಾಲೆ ಆರಂಭ ಮಾಡಲಾಗಿದೆ. ಮಲ್ಲೇಶ್ವರಂ ಕಾಲೇಜಿನ ಮಕ್ಕಳು ಹಾಗೂ ಶಿಕ್ಷಕರ ಜತೆ ಚರ್ಚೆ ಮಾಡಿದ್ದೇನೆ. ಇಲ್ಲಿ ಕಳೆದ ಒಂದು ವಾರದಿಂದ ತಯಾರಿ ಮಾಡಲಾಗಿದೆ. ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾ ಯರಿಗೆ ಶಾಲೆ ಆರಂಭ ಖುಷಿಯಾಗಿದೆ. ರಾಜ್ಯಾದ್ಯಂತ ಇದೇ ವಾತಾವರಣ ಇದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಮಕ್ಕಳ ಶಿಕ್ಷಕರ ಸಂಬಂಧ ಮತ್ತೆ ಶುರುವಾಗಿದೆ. ವಿದ್ಯಾರ್ಥಿಗಳು ಶಾಲೆ ಆರಂಭದ ಬಗ್ಗೆ ಸಂತೋಷವಾಗಿದ್ದಾರೆ. ಆನ್‌ಲೈನ್ ಕ್ಲಾಸ್ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಶಾಲೆ ಆರಂಭಕ್ಕೆ ವಿದ್ಯಾರ್ಥಿಗಳು ಧನ್ಯ ವಾದ ತಿಳಿಸಿದ್ದಾರೆ. ಕೋವಿಡ್ ಮಾರ್ಗ ಸೂಚಿ ಕಠಿಣವಾಗಿ ಅನುಸರಿ ಸಲು ಹೇಳಲಾಗಿದೆ. ಶಾಲೆ ಆರಂಭ ನನಗೆ ತುಂಬಾ ಸಂತೋಷವಾಗಿದೆ. ಇಂದು ಮಕ್ಕಳಿಗೆ ಕೋವಿಡ್‌ನಿಂದ ಸ್ವತಂತ್ರ ಸಿಕ್ಕಿದೆ ಎಂದು ಸಂತಸ ಪಟ್ಟಿದ್ದಾರೆ.

ಶಿವಮೊಗ್ಗ ವರದಿ
ರಾಜ್ಯಾದ್ಯಂತ ಇಂದಿನಿಂದ ಶಾಲಾ- ಕಾಲೇಜು ಆರಂಭ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ವಿಡಿಯೋ ಬಿಡುಗಡೆ ಮಾಡಿ, ಪೋಷಕರಿಗೆ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕು ಬಂದ ನಂತರ ದಲ್ಲಿ ನೇರ ಶಿಕ್ಷಣ ವ್ಯವಸ್ಥೆಯೇ ತಪ್ಪಿ ಹೋಗಿತ್ತು. ವಿಶ್ವದಲ್ಲಿ ಕೊರೊನಾ ಓಡಿ ಸುವಲ್ಲಿ ದೇಶ ಯಶಸ್ವಿಯಾಗು ತ್ತಿದ್ದು, ಕರ್ನಾಟಕ ಕೂಡ ಅದೇ ಹಾದಿಯಲ್ಲಿದೆ.

ಕೊರೊನಾ ಮೂರನೇ ಅಲೆ ಚರ್ಚೆ ನಡೀತಾ ಇದ್ದರೂ, ಎಷ್ಟು ದಿನ ನಮ್ಮ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯ? ಮಕ್ಕಳಿಗೆ ಆರೋಗ್ಯದ ಜೊತೆಗೆ ಉತ್ತಮ ಶಿಕ್ಷಣವನ್ನು ಕೊಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೀರ್ಮಾನ ವನ್ನು ಕೈಗೊಂಡಿದೆ. ಮಕ್ಕಳು ಆರೋಗ್ಯ ವಂತರಾಗಿರಲು ಏನು ವ್ಯವಸ್ಥೆ ಬೇಕೋ ಎಲ್ಲವನ್ನು ಸರ್ಕಾರ ಮಾಡುತ್ತದೆ ಎಂದಿ ದ್ದಾರೆ.

ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪೋಷಕರು ಸಹಕಾರ ನೀಡುವಂತೆ ಸಚಿವ ಈಶ್ವರಪ್ಪ ಮನವಿ ಮಾಡಿದರು.

ಸಾಗರ ಶಾಸಕ ಎಚ್. ಹಾಲಪ್ಪ ಪರಿಶೀಲನೆ
ಇಂದಿನಿಂದ ಶಾಲಾ- ಕಾಲೇಜುಗಳಲ್ಲಿ 9 ರಿಂದ 12 ನೇ ತರಗತಿಗಳು ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಶಾಸಕ ಹರತಾಳು ಹಾಲಪ್ಪ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಿದರು.

ಭೌತಿಕ ತರಗತಿ ವ್ಯವಸ್ಥೆ ಪರಿಶೀಲಿಸಿ, ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿಕೊಂಡು ತರಗತಿಗಳನ್ನು ನಡೆಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. ನಂತರ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಕೊಠಡಿಗಳ ನವೀಕರಣಕ್ಕೆ ಎಂಎಸ್ಐಎಲ್  ವತಿಯಿಂದ 35 ಲಕ್ಷ ಅನುದಾನ ಮಂಜೂರು ಮಾಡಿದ್ದು, ಪರಿಕರಗಳನ್ನು ಪರಿಶೀಲಿಸಿದರು. ನಗರಸಭೆ ಅಧ್ಯಕ್ಷರು, ಸದಸ್ಯರು, ಸಿಡಿsiಸಮಿತಿಯವರು ಉಪಸ್ಥಿತರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು