ನಂದಿನಿ ಹಾಲಿನ ಕ್ಯಾಂಟರ್ ಚಾಲಕ ನಿದ್ದೆ ಮಂಪರಿನಲ್ಲಿ ಮರಕ್ಕೆ ಡಿಕ್ಕಿ

 

ವಿಜಯ ಸಂಘರ್ಷ



ಶಿವಮೊಗ್ಗ: ನಂದಿನಿ ಹಾಲು ಕೊಂಡೊಯುತ್ತಿದ್ದ ಕ್ಯಾಂಟರ್ ಆಯನೂರು ಮತ್ತು ಕುಂಸಿ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿರುವ ಘಟನೆ ಇಂದು ನಡೆದಿದೆ.

ಚಾಲಕ ನಿದ್ದೆ ಮಂಪರಿನಲ್ಲಿ ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ರಭಸಕ್ಕೆ ವಾಹನದ ಮುಂಭಾಗದ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಷಾತ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಾಹನ ಚಾಲಕ ಮಧುಸೂದನ್ ಮತ್ತು ಕ್ಲೀನರ್ ಸಂತೋಷ್ ಕ್ಯಾಂಟರಿನಲ್ಲಿದ್ದರು ಎನ್ನಲಾಗಿದೆ. ಚಾಲಕ ವಾಹನದಿಂದ ಹೊರಬಂದಿದ್ದು, ಕ್ಲೀನರ್ ಸಂತೋಷ್ ವಾಹನದ ಕ್ಯಾಬಿನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಸೊಂಟದ ಕೆಳಭಾಗ ಎರಡು ಕಾಲು ಮುರಿದುಕೊಂಡು ಹೊರಬರಲಾರದೆ ಒದ್ದಾಡುತಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ, ಕ್ಲೀನರ್ ಸಂತೋಷ್ ನನ್ನು ವಾಹನದಿಂದ ಹೊರತೆಗೆದು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್. ಅಶೋಕ್ ಕುಮಾರ್, ಠಾಣಾಧಿಕಾರಿ ಕೆ.ಎನ್. ಪ್ರವೀಣ್, ಸಿಬ್ಬಂದಿ ಎಚ್. ಸುನೀಲ್, ವಿಜಯ್ ಖುರೇಶಿ, ಮನುನಾಥ್, ವಿಷ್ಣುನಾಯ್ಕ್, ದೇವರಾಜ್, ಮೂಡಬಸಪ್ಪ ಮತ್ತಿತರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು