ಗಣೇಶನ ಹಬ್ಬದ ನಂತರ ಶಾಲಾ ಆರಂಭ ತೀರ್ಮಾನ

 

ವಿಜಯ ಸಂಘರ್ಷ



ಬೆಂಗಳೂರು: ಸಿಎಂ  ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ  ಸಚಿವರು, ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ರಾಜ್ಯದಲ್ಲಿನ ಕೋವಿಡ್ 19 ಸ್ಥಿತಿಗತಿ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು.

ಸಾರ್ವಜನಿಕ ಗಣೇಶೋತ್ಸವ ನಡೆಸುವ ಕುರಿತಾಗಿ ಸೆ: 5ರಂದು ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೆ 6, 7 ಹಾಗೂ 8ನೇ ತರಗತಿ ಆರಂಭಕ್ಕೆ ಸಂಬಂಧಿಸಿದಂತೆಯೂ ಗಣೇಶನ ಹಬ್ಬದ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ತೀರ್ಮಾನಗಳ ಕುರಿತಾಗಿ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಇಂತಿವೆ:
- ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತು ಪಡಿಸಿ ಇತರ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಪೂ ಸಡಿಲಿಸಲಾಗುವುದು.
ಕೇರಳದಲ್ಲಿ ಪಾಸಿಟಿವಿಟಿ ದರ ಶೇ. 19 ಇದ್ದು ಪ್ರತಿದಿನ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರಿಕೆ.
- ಕೇರಳ ರಾಜ್ಯದಿಂದ ಬರುವ ಜನರಿಗೆ ಕಡ್ಡಾಯವಾಗಿ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸ ಲಾಗುವುದು. ಏಳನೇ ದಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. (ಲಸಿಕೆ ಹಾಕಿಸಿದ್ದರೂ, ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಪಡೆದುಕೊಂಡಿದ್ದರೂ ಸಹ ಈ ಪ್ರಕ್ರಿಯೆ ಕಡ್ಡಾಯ)
- ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ , ಕೋಲಾರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸೋಂಕಿನ ಸರಾಸರಿ ಶೇ. 1.5 ಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ಸಡಿಲಿಸಲು ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಲಾಯಿತು.
- ಮದುವೆ ಮತ್ತಿತರ ಸಮಾರಂಭಗಳಿಗೆ ಕಲ್ಯಾಣ ಮಂಟಪಗಳಲ್ಲಿ ಗರಿಷ್ಠ 400 ಮಂದಿಯ ಮಿತಿಗೊಳಪಟ್ಟು ಶೇ 50 ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸುವುದು.
- ಶೇ. 2ಕ್ಕಿಂತ ಪಾಸಿಟಿವಿಟಿ ದರ ಕಡಿಮೆ ಇರುವ ತಾಲೂಕುಗಳಲ್ಲಿ 6, 7 ಮತ್ತು 8ನೇ ತರಗತಿ ಆರಂಭಕ್ಕೆ ಗಣೇಶನ ಹಬ್ಬದ ನಂತರ ಅವಲೋಕಿಸಿ, ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ವಾರದಲ್ಲಿ 6 ದಿನ ಶಾಲೆ ತೆರೆಯ ಲಾಗುವುದು. ದಿನ ಬಿಟ್ಟು ದಿನ ಶೇ 50 ರ ಹಾಜರಾತಿಯೊಂದಿಗೆ ತರಗತಿಗಳು ನಡೆಯಲಿವೆ. ವಾರಾಂತ್ಯದಲ್ಲಿ ಕೊಠಡಿಗಳನ್ನು ಸ್ಮಾನಿಟೈಸ್ ಮಾಡಲಾಗುವುದು.
- ಕಳೆದ ವಾರ 9 ರಿಂದ 12ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಉತ್ತಮವಾಗಿದೆ.
- 2912 ಪಂಚಾಯಿತಿಗಳಲ್ಲಿ 0 ಪಾಸಿಟಿವಿಟಿ ಇದೆ. 6472 ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು, 14 ಮಕ್ಕಳು ಪಾಸಿಟಿವ್ ಬಂದಿದೆ. ಇದು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದೆ.



ಗಣೇಶೋತ್ಸವದ ಬಗ್ಗೆ: ಮೂರನೇ ಅಲೆ ಬರುವ ನಿರೀಕ್ಷೆಯಲ್ಲಿದ್ದೇವೆ. ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ನಾವು ಎಚ್ಚರ ವಹಿಸ ಬೇಕಾಗಿದೆ. ಬೆಂಗಳೂರು ಮತ್ತು ಎಲ್ಲ ಜಿಲ್ಲೆಗಳ ಆಯುಕ್ತರು/ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿಗಳಿಂದ ಸೆ: 5 ನೇ ತಾರೀಖಿನೊಳಗೆ ವರದಿ ಪಡೆದು, ಸಂಘಟಕರಿಂದ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಕುರಿತು ಚರ್ಚಿಸಿ, ತಾಲ್ಲೂಕು ಮಟ್ಟದಲ್ಲಿನ ಪುಕರಣಗಳ ಸಂಖ್ಯೆ ಪರಿಶೀಲಿಸಿ, ತಜ್ಞರೊಂದಿಗೆ ಚರ್ಚಿಸಿ ಸೆ: 5 ರಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು