ವಿಜಯ ಸಂಘರ್ಷ
ಭದ್ರಾವತಿ : ಲಯನ್ಸ್ ಜಿಲ್ಲೆ ಪ್ರಾಂತೀಯ ಅಧ್ಯಕ್ಷರಾಗಿ ಹೆಬ್ಬಂಡಿ ನಾಗರಾಜ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಗವರ್ನರ್ ವಿಶ್ವನಾಥ್ ಶೆಟ್ಟಿ ರವರ ಅವಧಿ ಮುಗಿದ ಹಿನ್ನಲೆಯಲ್ಲಿ
ಹೆಬ್ಬಂಡಿ ನಾಗರಾಜ್ ರವರನ್ನು ನೇಮಕ ಮಾಡಲಾಗಿದೆ. 2006 ರಿಂದ ಲಯನ್ಸ್ ಸೇವಾ ಸಂಸ್ಥೆಯ ಯಲ್ಲಿ ಸಕ್ರೀಯ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.
ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಜಿಯಾಗಿ ಸೇವೆಸಲ್ಲಿಸಿರುವ ಇವರು, ಒಂದು ದಶಕದಿಂದ ವಲಯ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಕ್ಯಾಬಿನೆಟ್ ನಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ವಲಯ ಅಧ್ಯಕ್ಷ ಸೀತಾರಾಮ್ ಪದಾಧಿಕಾರಿಗಳಾಗಿ ಎ.ಎಸ್. ಕುಮಾರ ಸ್ವಾಮಿ, ವಿ. ರಾಜು ರವರು ಆಯ್ಕೆಯಾಗಿದ್ದಾರೆ.
ತಾಲೂಕಿನ ಅತ್ತಿಗುಂದ ಶಾಲೆಗೆ ಒಂದು ಪ್ರಿಂಟರ್, ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ನಂತರ ವೀರಶೈವ ರುದ್ರಭೂಮಿಯಲ್ಲಿ ಸಸ್ಯರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಹೇಮಂತ್ ಕುಮಾರ, ವಿನೋದ್ ಗಿರಿ, ಪ್ರಹ್ಲಾದ್, ಚಿದಾನಂದ್, ದಿವಾಕರ್ ಶೆಟ್ಟಿ, ವೀರಶೈವ ಸಮಾಜದ ಮುಖಂಡರು ಮತ್ತಿತರರು ಭಾಗವಹಿಸಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795