ಬಿಜೆಪಿ ಅವಧಿಯಲ್ಲಿ ಅರಸುರವರ ಕನಸು ನನಸಾಗಲಿದೆ: ಕೆ.ಎಸ್.ಈ

 

ವಿಜಯ


ಸಂಘರ್ಷ


ಶಿವಮೊಗ್ಗ: ಮಾಜಿ ಸಿಎಂ ದಿವಂಗತ ದೇವರಾಜ ಅರಸು ಅವರ ಕನಸನ್ನು ನನಸು ಮಾಡುತ್ತಿರುವವರು ನಾವು ಬಿಜೆಪಿಯವರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.



ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ದೇವರಾಜ ಅರಸು ಅವರ 102 ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಸು ಅವರಷ್ಟು ಹಿಂದುಳಿದ ವರ್ಗದವರಿಗೆ ಮಾನ್ಯತೆ ನೀಡುತ್ತಿರು ವವರು ಬಿಜೆಪಿಯವರೇ, ಅವರ ಕನಸನ್ನು ನಾವು ನನಸು ಮಾಡುತ್ತಿ ದ್ದೇವೆ. ನಗರದಲ್ಲಿ ನನೆಗುದಿಗೆ ಬಿದ್ದಿರುವ ದೇವರಾಜ ಅರಸು ಭವನ ನಿರ್ಮಾಣಕ್ಕೆ 2 ಕೋಟಿ ರೂ ಹಣ ಬಿಡುಗಡೆ ಮಾಡಿ, ಭವನದ ಉದ್ಟಾಟನೆಯನ್ನು ನಾವೇ ಮಾಡುತ್ತೆ ಎಂದರು.

ನಾವು ಕೇವಲ ಭಾಷಣ ಮಾಡಲು ಬಂದವರಲ್ಲ : ಈ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ, ಹಣ ಬಿಡುಗಡೆ ಮಾಡಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರು, ಈ ಜಾಗ ನನ್ನದೆಂದು ಮುಸ್ಲಿಂ ವ್ಯಕ್ತಿಯೊಬ್ಬ ಕೋರ್ಟ್​ಗೆ ಹೋಗಿದ್ದ, ಕೋರ್ಟ್ ತೀರ್ಮಾನವಾದ ಬಳಿಕ ಭವನ ನಿರ್ಮಾಣ ಮಾಡಲಾಗುತ್ತಿದೆ. ನಾವು ಕೇವಲ ಭಾಷಣ ಮಾಡಲು ಬಂದವರಲ್ಲ, ವೈದ್ಯಕೀಯ ಶಿಕ್ಷಣದಲ್ಲಿ‌ ಒಬಿಸಿ ಅವರಿಗೆ ಶೇ 27 ರಷ್ಟು ಮೀಸಲಾತಿ ನೀಡಲು ಮೋದಿಯೇ ಬರಬೇಕಾಯಿತು ಎಂದು ಹೇಳಿದರು.

ಹಿಂದುಳಿದ ವರ್ಗಕ್ಕೆ ಅತೀ ಹೆಚ್ಚು ಮೀಸಲು ನೀಡಿದ್ದು ಬಿಜೆಪಿ: ಅನೇಕ ಹಿಂದುಳಿದ ಸಮುದಾಯವನ್ನು ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಲು ನಾನು ಸಾಕಷ್ಟು ಹೋರಾಟ ನಡೆಸಿದ್ದೇನೆ. ‌ಹಿಂದೆ ವಾಜಪೇಯಿ ಅವರು ಬ್ಯಾಕ್ ಲಾಕ್ ಹುದ್ದೆಗೆ ನ್ಯಾಯ ಒದಗಿಸಿ ಅರ್ಹರಿಗೆ ನೀಡಿದರು. ಈಗ ಮೋದಿ ಅವರು 47 ಜನ ದಲಿತ ಹಾಗೂ ಹಿಂದುಳಿದ ವರ್ಗದವರನ್ನು ಮಂತ್ರಿಗಳನ್ನಾಗಿ ಮಾಡಿದ್ದಾರೆ‌. ಬಿಜೆಪಿ ಅವರು ಅಧಿಕಾರಕ್ಕೆ ಬಂದ್ರೆ, ಮೀಸಲಾತಿ ತೆಗೆದು ಹಾಕುತ್ತಾರೆ ಅಂದ್ರು, ಆದರೆ, ಹಿಂದುಳಿದ ವರ್ಗದವರಿಗೆ ಅತಿ ಹೆಚ್ಚು ಮೀಸಲಾತಿ ನೀಡಿದ್ದು ಬಿಜೆಪಿ ಎಂದು ತಿಳಿಸಿದರು.

ಜಾತಿ ಜನಗಣತಿ ಬಿಡುಗಡೆ ಮಾಡುತ್ತೇವೆ: ಜಾತಿ ಜನಗಣತಿ ನಾವು ಬಿಡುಗಡೆ ಮಾಡಿಸುತ್ತೇವೆ. ಈ ಕುರಿತು ಚರ್ಚೆ ನಡೆಸಿದಾಗ ಒಳ್ಳೆಯದ್ದು - ಕೆಟ್ಟದ್ದು ತಿಳಿಯುತ್ತದೆ. ಸಿದ್ದರಾಮಯ್ಮ ಹಾಗೂ ಆಂಜನೇಯ ಯಾಕೆ ಜಾತಿ ಜನಗಣತಿ ಜಾರಿಗೆ ತರಲಿಲ್ಲ ಅಂತ ಖಾಸಗಿಯಾಗಿ ಕೇಳಿದ್ರೆ ಹೇಳುತ್ತೇನೆ ಎಂದರು. ಅಲ್ಲದೇ, ದೇವರಾಜ್ ಅರಸು ಅವರು ಕಾಂಗ್ರೆಸ್ ನವರ ಕಾಟ ತಾಳಲಾರದೇ 'ಅರಸು ಕಾಂಗ್ರೆಸ್' ಪಕ್ಷ ಯಾಕೆ ಕಟ್ಟಿದರು ಎಂದು ಪ್ರಶ್ನೆ ಮಾಡಿದರು.

ಈಶ್ವರಪ್ಪ ಮನಸು ಮಾಡಿದ್ರೆ ಜಾತಿ ಜನಗಣತಿ ಹೊರ ತರಬಹುದು: ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಜಾತಿ ಜನಗಣತಿಯನ್ನು ಈಶ್ವರಪ್ಪ ಮನಸು ಮಾಡಿದ್ರೆ ಹೊರ ತರಬಹುದು. ಹಿಂದೆ ಪರಿಷತ್​ನಲ್ಲಿ ಸಿದ್ದರಾಮಯ್ಯ ಅವರಿಗೆ ಬಹಳ‌ ಕಠಿಣ ಮಾತುಗಳ ಮೂಲಕ ಜಾತಿ- ಜನಗಣತಿಯ ಬಗ್ಗೆ ಪ್ರಶ್ನೆ ಕೇಳಿದ್ರಿ, ಈಗ ನೀವೆ ಮನಸು ಮಾಡಬೇಕು ಎಂದು ಕೆಎಸ್​​​​ಇಗೆ ಹೇಳಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು