ವಿಜಯ ಸಂಘರ್ಷ
ಕೆ.ಆರ್.ಪೇಟೆ (ಮಂಡ್ಯ): ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ತಾಲ್ಲೂಕಿನ ವಿಠಲಾಪುರ ಗ್ರಾಮ ಪಂಚಾಯಿತಿ ಕ್ಷೇತ್ರ ಅಧ್ಯಯನ ನಡೆಸಿದರು.
ಗ್ರಾಪಂ ಸಭಾಂಗಣದಲ್ಲಿ ಪಿ.ಡಿ.ಓ ಸಯ್ಯದ್ ಮುಜಾಕಿರ್ ಪಂಚಾಯಿತಿ ಯ ಗ್ರಾಮಗಳ ಅಭಿವೃದ್ದಿಗೆ ಕೈಗೊಳ್ಳುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೃಷಿ ಹೊಂಡಗಳ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ, ಜಾನುವಾರು ಗಳಿಗೆ ಕುಡಿಯುವ ನೀರಿಗೆ ಜಾನು ವಾರು ತೊಟ್ಟಿಗಳ ನಿರ್ಮಾಣ, ಕೊಟ್ಟಿಗೆಗಳ ನಿರ್ಮಿಸುವುದು. ಕೆರೆ ಕಟ್ಟೆಗಳ ಹೂಳುತ್ತುವ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ಅಂತರ್ಜಲವೃದ್ದಿಗೆ ಸಹಕಾರಿ ಯಾಗುತ್ತಿದೆ ಎಂದರು.
ರಸ್ತೆಗಳ ಬದಿಯಲ್ಲಿ, ಗುಂಡುತೋಪು ಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಉಳಿಸಲು ಕ್ರಮ ವಹಿಸಲಾಗುತ್ತದೆ. ಚರಂಡಿಗಳ ನಿರ್ಮಾಣ, ಗ್ರಾಮೀಣ ಬೀದಿಗಳನ್ನು ಕಾಂಕ್ರೀಟ್ ಗಳನ್ನಾಗಿ ಅಭಿವೃದ್ದಿ ಮಾಡುವುದು. ರೈತರ ಜಮೀನಿಗೆ ಹೋಗಲು ಬಂಡಿ ರಸ್ತೆಗಳ ನಿರ್ಮಾಣ, . ರೈತರು ಜಮೀನಿನಲ್ಲಿ ಬದುಗಳ ನಿರ್ಮಾಣಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಗ್ರಾಮೀಣ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಆಯ್ಕೆ ಗ್ರಾಮದಲ್ಲಿ ಪ್ರತಿ ವ್ಯಕ್ತಿಗೆ ನಿತ್ಯ 50 ಲೀಟರ್ ಕುಡಿಯುವ ಪೂರೈಕೆ, ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಲು ತಿಪ್ಪೆಗಳನ್ನು ತೆರವು, ಪ್ರತಿ ಆರು ತಿಂಗಳಿಗೊಮ್ಮೆ ಚರಂಡಿಗಳನ್ನು ಸ್ವಚ್ಚಗೊಳಿಸಿ ಗ್ರಾಮದ ಆರೋಗ್ಯಕ್ಕೆ ಗ್ರಾಮ ಪಂಚಾಯಿತಿಯು ಹೆಚ್ಚಿನ ಕಾಳಜಿ ವಹಿಸುತ್ತದೆ ಎಂದು ಪಿಡಿಓ ತಿಳಿಸಿದರು.
ನಿಯಮಿತವಾಗಿ ನಡೆಯುವ
ಗ್ರಾಮ ಸಭೆಗಳಲ್ಲಿ ಗ್ರಾಪಂ ಸದಸ್ಯರುಗಳ ಸಮ್ಮುಖದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು. ಒಟ್ಟಾರೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ಗ್ರಾಮ ಪಂಚಾಯಿತಿಯು ಸ್ಥಳೀಯ ಸರ್ಕಾರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಗಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಪಿಡಿಓ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉತ್ತರ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಸಾಕಮ್ಮಸೋಮಶೇಖರ್, ಉಪಾಧ್ಯಕ್ಷ ಗಣೇಶ್, ಸದಸ್ಯ ಪಿ.ಕೆ.ಕುಮಾರ್, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಎಂ.ಸೋಮು, ಪುಷ್ಪಲತಾ, ಪುನೀತ್, ಅರುಣ್ ಮತ್ತಿತರರಿದ್ದರು.
ವರದಿ : ಸಿ.ಆರ್. ಜಗದೀಶ್, ಕೆ.ಆರ್ ಪೇಟೆ, ಮಂಡ್ಯ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795