ಯತ್ನಾಳ್ ಕನ್ನಡನಾಡಿನಲ್ಲಿ ಇರುವುದೇ ಅಸಂಬದ್ದ: ಯುವ ಕಾಂಗ್ರೆಸ್ ಆರೋಪ

 

ವಿಜಯ ಸಂಘರ್ಷ



ಶಿವಮೊಗ್ಗ : ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಪಕ್ಷದ ನಾಯಕರ ಹಾಗೂ ಬುದ್ದಿ ಜೀವಿಗಳ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅಸಂಬದ್ದ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಇಂದು ಯುವ ಕಾಂಗ್ರೆಸ್ ನಗರದ ಬಿಹೆಚ್ ರಸ್ತೆಯಲ್ಲಿ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನೆ ನಡೆಸಿತು.

ತಾಲಿಬಾನ್ ವಿಷಯಕ್ಕೆ ಸಂಬಂಧಿಸಿ ದಂತೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ತಮ್ಮ ಬಾಯಿ ಚಪಲಕ್ಕಾಗಿ ಹೊಲಸು ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನ ಪಾದದ ಧೂಳಿಗೂ ಸಮನಲ್ಲದ,  ಯತ್ನಾಳ್ ಕನ್ನಡನಾಡಿನಲ್ಲಿ ಇರುವುದೇ ಒಂದು ಅಸಂಬದ್ದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಗಳ ನಡುವೆ ಮಾತನಾಡಿ, ದೇಶದಲ್ಲಿ ಶಾಂತಿ ಕದಡುವ ಹೇಳಿಕೆ ನೀಡುತ್ತಿರುವ ಯತ್ನಾಳ್ ರನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಯುವ ಕಾಂಗ್ರೆಸ್ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎನ್. ರಮೇಶ್ ,  ಕೆ.ರಂಗನಾಥ್, ಹೆಚ್.ಪಿ ಗಿರೀಶ್,  ಬಿ.ಲೋಕೇಶ್, ಎಸ್.ಕುಮರೇಶ್ , ಶಶಿಕುಮಾರ್ ಸಿರಿಗೆರೆ , ಕಲೀಮ್ ಅಹಮ್ಮದ್, ಅರುಣ್, ವೆಂಕಟೇಶ್ ಕಲ್ಲೂರು , ಪವನ್ , ಮಸ್ತಾನ್ , ಸುಹಾಸ್ ಗೌಡ , ಶ್ರೀನಿವಾಸ್ , ರಾಹುಲ್ , ಪ್ರಶಾಂತ್ , ದೇವರಾಜ್ , ನಾಗರಾಜ್ , ವೆಂಕಟೇಶ್, ಅಭಿ, ಚೇತನ್  ಇತರರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು