ಕೆಎಸ್ ಆರ್ ಟಿಸಿ ನಷ್ಟಕ್ಕೆ ಡೀಸಲ್ ದರ ಹೆಚ್ಚಳ: ಸಚಿವ ಶ್ರೀರಾಮುಲು

 

ವಿಜಯ ಸಂಘರ್ಷ



ಬೆಂಗಳೂರು: ಕೋವಿಡ್‌ನಿಂದ ಬಸ್‌ಗಳ ಸಂಚಾರ ಪ್ರತಿಭಟನೆಗಳಿಂದ ಸೇರಿದಂತೆ ಹಲವು ಕಾರಣಗಳಿಂದಾಗಿ ರಾಜ್ಯ ರಸ್ತೆ ಸಾರಿಗೆ ನಷ್ಟದಲ್ಲಿದ್ದು,ಈ ಎಲ್ಲವನ್ನು ಸರಿಪಡಿಸಿಕೊಂಡು ಮತ್ತೆ ಸಾರಿಗೆ ಇಲಾಖೆಯನ್ನು ಲಾಭದಾಯಕ ಮಾಡಲು ವಹಿಸಿರುವ ಜವಾಬ್ದಾರಿ ಯನ್ನು ಸಮರ್ಥವಾಗಿ ನಿಭಾಯಿಸಲು ಸಾರಿಗೆ ಖಾತೆಯನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡಿರುವುದಾಗಿ ಸಚಿವ ಶ್ರೀರಾಮುಲು ವಿಕಾಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಷ್ಠಿಗೂ ಮುನ್ನ ಇಲಾಖಾ ನಿಗಮಗಳ ಸ್ಥಿತಿಗತಿ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಬಿಎಂಟಿಸಿ, ಕೆಎಸ್ಆರ್‌ಟಿಸಿ, ನಾಲ್ಕು ನಿಗಮದ ಜೊತೆ ಹಾಗೂ ದೇವರಾಜ್ ಅರಸ್ ಟರ್ಮಿನಲ್ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತಿಯೊಂದು ಇಲಾಖೆಯೂ ಪ್ರಗತಿಯಾಗಬೇಕೆಂಬ ನಿಟ್ಟಿನಲ್ಲಿ ಚರ್ಚೆ ಮಾಡಬೇಕು. ಕೋವಿಡ್ ಅಲೆಯ ಬಳಿಕದ ಪರಿಸ್ಥಿತಿ ಬಗ್ಗೆ ಕೂಡ ಚರ್ಚೆಯಾಗಿದೆ ಎಂದರು.

ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭದಾಯಕವಾಗಿ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ.ಸದ್ಯ ನಾವಿರುವ ಪರಿಸ್ಥಿತಿ ನಷ್ಟದಲ್ಲಿದ್ದೇವೆ.ಜನರಿಗೆ ಹೊರೆಯಾಗದ ರೀತಿ ಲಾಭವಾಗಿ ಮಾಡಬೇಕಿದೆ. ಸೇವೆಯ ಜೊತೆಯಲ್ಲಿ ಲಾಭದಾಯಕ ವಾಗಿ ಮಾಡಬೇಕು.ಈ‌ನಿಟ್ಟಿನಲ್ಲಿ ಎಲ್ಲಾ ನಿಗಮಗಳ ಎಂಡಿಗಳ ಜೊತೆ ಚರ್ಚೆ ಮಾಡಿರುವುದಾಗಿ ಶ್ರೀರಾಮುಲು ತಿಳಿಸಿದರು‌.

ಇಲಾಖೆಯ ದೊಡ್ಡ ನಷ್ಟಕ್ಕೆ ಕಾರಣ ಡೀಸಲ್ ದರ ಹೆಚ್ಚಳ.ಅನೇಕರಿಗೆ ಕೊರೋನಾ ಬಂದಿದ್ದರಿಂದಲೂ ನಷ್ಟವಾಗಿದೆ.ಇದಕ್ಕಾಗಿ ವಿಶೇಷವಾಗಿ ಜನರಿಗೆ ಅನುಕೂಲ ಅಗುವ ರೀತಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ ಎಂದರು.

ಇಲಾಖೆಯನ್ನು ಭದಾಯಕವಾಗಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ ರಾಮುಲು, ಪಾರದರ್ಶಕ ವಾಗಿ ದುಡಿದು ಜನರಿಗಿರುವ ಆತಂಕ ಹೋಗುವಂತ ಕೆಲಸ ಆಗಬೇಕಿದೆ. ಟೆಕ್ನಾಲಜಿ ಬಳಸಿ ಕ್ಯಾಶ್ ಲೆಸ್ ಟಿಕೆಟ್ ದೊರೆಯುವಂತೆ ಮಾಡಬೇಕು.

ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಇಲಾಖೆ ಚಾಲೆಂಜ್ ಆಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ.ಲಾಂಗ್ ರೂಟ್‌ ಗಳಲ್ಲಾಗುತ್ತಿರುವ ಡೀಸಲ್ ನಷ್ಟ ಕಡಿಮೆ ಮಾಡಲು ಒಂದಷ್ಟು ಯೋಜನೆ ರೂಪಿಸಲಾಗಿದೆ ಎಂದರು.

ಅಂತರ್ ನಿಗಮದ ವರ್ಗಾವಣೆ ವಿಚಾರದಲ್ಲಿ 2,365 ಜನರಲ್ಲಿ ಅಂತರ್ ನಿಗಮ ವರ್ಗಾವಣೆ ಮಾಡಿದ್ದಾರೆ. ದೂರದೂರಿಗೆ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾದಾಗಲೂ ಖಾಲಿ ವಾಹನ ಚಲಾಯಿಸುವುದರಿಂದಲೂ ಇಂಧನ ನಷ್ಟವಾಗಿ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ.ಇದಕ್ಕೆ ಪರ್ಯಾಯ ವಾಗಿ ಎಲೆಕ್ಟ್ರಾನಿಕ್ ಬಸ್ ಹೆಚ್ಚು ತರೋದ್ರಿಂದ ನಷ್ಟ ಕಡಿಮೆ ಮಾಡ ಬಹುದು.ಇಂಧನ ಬೆಲೆ ಇಡೀ ದೇಶದಲ್ಲಿದೆ, ಕಡಿಮೆ ಮಾಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾರಿಗೆ ನೌಕರರ ಬೇಡಿಕೆ ವಿಚಾರ ಪೂರೈಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಮುಲು,ಹಿಂದೆ ಲಕ್ಷ್ಮಣ ಸವದಿ ಸಾರಿಗೆ ಸಚಿವ ರಾಗಿದ್ದಾಗ, ನಾನು ಆಗ ಚರ್ಚೆ ಮಾಡಿದ್ದೆ.ಕೋವಿಡ್‌ನಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ಕೊಡಲು ನಿರ್ಧರಿಸಲಾಗಿತ್ತು. ನಾನಾಗ ಆರೋಗ್ಯ ಇಲಾಖೆ ಸಚಿವನಾಗಿದ್ದೆ ಎಂದು ಸೂಚ್ಯವಾಗಿ ನುಡಿದರು.

ಇಲಾಖೆಗಾದ ನಷ್ಟ ನೋಡುವುದಾರೆ,
ಕೆಎಸ್‌ಆರ್‌ಟಿಸಿ 427ಕೋ.ರೂ ಬಿಎಂಡಿಸಿ 248, ಹೊಸ ಕೆಸ್‌ಆರ್‌ಟಿಸಿ 89,ಕಲ್ಯಾಣ ಕರ್ನಾಟಕ 89,ಎಲ್ಲಾ ಸೇರಿ ಒಟ್ಟಾರೆ 1121 ಕೋ.ರೂ.ನಷ್ಟವಾಗಿದೆ. ಸಾರಿಗೆ ನೌಕರರಿಗೆ ಈವರೆಗೂ ಸರ್ಕಾರದಿಂದ ಹಣ ಬಿಡುಗಡೆ ಮಾಡಿ‌ ವೇತನ ನೀಡಲಾಗಿದೆ.ಕಳೆದ ವರ್ಷ 1,953 ಕೋ.ರೂ, ಈವರ್ಷ 597ಕೋ.ರೂ.ಸೇರಿದಂತೆ
ಒಟ್ಟಾರೆ 2,551 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಇಂದಿನಿಂದ ಶಾಲೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಇಂದಿನಿಂದಲೇ ಬಸ್ ಪಾಸ್ ಅಪ್ಲೈ ಮಾಡಿ ಪಡೆಯಬಹುದು. ಸಮಾಜ ಕಲ್ಯಾಣ ಇಲಾಖೆಯ ಹಣ ಬಳಸಿ ಕೊಂಡು SC, ST ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇತರೆ ಮಕ್ಕಳಿಗೆ ರಿಯಾಯಿತಿ ನೀಡಲಾಗುವುದು.ಶಾಲಾ ಕಾಲೇಜು ಆರಂಭ ಹಿನ್ನೆಲೆ ಇವತ್ತಿನಿಂದಲೇ ಬಸ್ ಪಾಸ್ ಪಡೆದುಕೊಳ್ಳಬಹುದು.ಅರ್ಜಿ ಸಲ್ಲಿಸಿ ಆನ್ ಲೈನ್ ಮೂಲಕ ಪಾಸ್ ಪಡೆದುಕೊಳ್ಳಬಹುದು ಎಂದರು.

ಎಸ್ ಸಿ, ಎಸ್ ಟಿ ಮಕ್ಕಳಿಗೆ ಉಚಿತ ಬಸ್ ಪಾಸ್ ಪರಿಶಿಷ್ಟ ಜಾತಿ, ಪಂಗಡ ಇಲಾಖೆಯಿಂದ 80 ಕೋಟಿ ಬಿಡುಗಡೆ ಮಾಡುವುದಾಗಿ ಸಚಿವರು ಸ್ಪಷ್ಟಪಡಿಸಿ ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು