ಬಸವ "ರಾಜ"ರ ಆಸ್ಥಾನ ದಲ್ಲಿ ಇವರೇ ಮಂತ್ರಿಗಳು

 

ವಿಜಯ ಸಂಘರ್ಷ



ಬೆಂಗಳೂರು: ಸಿಎಂ ಬಸವರಾಜ್  ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಇಂದು ಮದ್ಯಾಹ್ನ ವಿಸ್ತರಣೆಯಾಗಲಿದ್ದು, ಈ ಬಾರಿ ಡಿಸಿಎಂ ಹುದ್ದೆಗೆ ಕೋಕ್ ನೀಡಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಂದು ಒಟ್ಟು 29 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಸೂಚನೆಯ ಮೇರೆಗೆ ಡಿಸಿಎಂ ಹುದ್ದೆ ಇರುವುದಿಲ್ಲ. ಮುಂಬರುವ ಚುನಾವಣೆ ಹಾಗೂ ಆಡಳಿತದ ದೃಷ್ಟಿಯಿಂದ ಸಚಿವರನ್ನು ಆಯ್ಕೆ ಮಾಡಲಾಗಿದೆ.

ಸಂಪುಟ ವಿಸ್ತರಣೆ ವಿಚಾರದಲ್ಲಿ ನಿಕಟಪೂರ್ವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ರೀತಿಯಲ್ಲಿ ಒತ್ತಡ ಹೇರಿಲ್ಲ ಎಂದು  ಸ್ಪಷ್ಟಪಡಿಸಿದರು.



ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ
ಆರಗ ಜ್ಞಾನೇಂದ್ರ, ತೀರ್ಥಹಳ್ಳಿ
ಎಮ್‌ಟಿಬಿ ನಾಗರಾಜ್, ಹೊಸಕೋಟೆ
ಬಿ.ಸಿ. ಪಾಟೀಲ್, ಹಿರೆಕೇರೂರು
ಉಮೇಶ್ ಕತ್ತಿ, ಹುಕ್ಕೇರಿ
ಹಾಲಪ್ಪ ಆಚಾರ್, ಯಲಬುರ್ಗ
ಕೆ. ಗೋಪಾಲಯ್ಯ, ಮಹಾಲಕ್ಷ್ಮೀ ಲೇಔಟ್, ಬೈರತಿ ಬಸವರಾಜ್ ಕೆ.ಆರ್. ಪುರಂ, ವಿ. ಸೋಮಣ್ಣ, ಗೋವಿಂದ ರಾಜ ನಗರ, ಅಶ್ವತ್ಥ ನಾರಾಯಣ, ಮಲ್ಲೇಶ್ವರಂ, ಗೋವಿಂದ ಕಾರಜೋಳ, ಮುದೋಳ, ಬಿ. ಸಿ. ರಾಜೇಶ್, ತಿಪಟೂರು, ಸುನೀಲ್ ಕುಮಾರ್, ಕಾರ್ಕಳ, ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ, ಸಿಸಿ ಪಾಟೀಲ್ ನರಗುಂದ, ಮುನಿರತ್ನ, ಆರ್.ಆರ್. ನಗರ, ಎಸ್. ಅಂಗಾರ, ಸುಳ್ಯ
ಕೋಟ ಶ್ರೀನಿವಾಸ ಪೂಜಾರಿ ಎಮ್‌ಎಲ್‌ಸಿ, ಶ್ರೀರಾಮುಲು, ಮುಳಕಾಲ್ಮೂರು, ಆರ್. ಅಶೋಕ್, ಪದ್ಮನಾಭನಗರ, ಮುರುಗೇಶ್ ನಿರಾಣಿ, ಬಿಳಗಿ, ಕೆ. ಸುಧಾಕರ್, ಚಿಕ್ಕಬಳ್ಳಾಪುರ, ಎಸ್.ಟಿ. ಸೋಮಶೇಖರ್, ಯಶವಂತಪುರ
ಆನಂದ್ ಸಿಂಗ್, ವಿಜಯನಗರ
ಶಶಿಕಲಾಜೊಲ್ಲೆ, ನಿಪ್ಪಾಣಿ
ಶಿವರಾಮ್ ಹೆಬ್ಬಾರ್, ಶಂಕರ್ ಮುನೇನಕೊಪ್ಪ, ನವಲಗುಂದ
ಪ್ರಭು ಚೌಹಾಣ್, ಔರಾದ್ ಇವರೆಲ್ಲ ಇಂದೇ ಮದ್ಯಾಹ್ನ ಅಧಿಕಾರ ಸ್ವೀಕರಿಸಲಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು