ಬೆಂದಕಾಳೂರಿಗೆ ಒಲಿದ ಏಳು ಮಂತ್ರಿಸ್ಥಾನ

 

ವಿಜಯ ಸಂಘರ್ಷ



ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬೆಂಗಳೂರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಲಾಗಿದೆ. ಬೆಂಗಳೂರು ನಗರ ಪ್ರತಿನಿಧಿಸುವ 7 ಶಾಸಕರು ಸಚಿವರಾಗುತ್ತಿದ್ದಾರೆ. ನಗರದಿಂದ ಸಚಿವರಾಗಿದ್ದ ಅರವಿಂದ ಲಿಂಬಾವಳಿ, ಎಸ್. ಸುರೇಶ್ ಕುಮಾರ್ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಮಹತ್ವದ ಸಂಗತಿ.

ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನಗೆ ಮಣೆ ಹಾಕಲಾಗಿದೆ.
ಉಳಿದಂತೆ ಬೆಂಗಳೂರು ನಗರದ ಶಾಸಕರಾದ ಆರ್. ಅಶೋಕ, ವಿ. ಸೋಮಣ್ಣ , ಕೆ. ಗೋಪಾಲಯ್ಯ, ಬೈರತಿ ಬಸವರಾಜ, ಡಾ. ಸಿ. ಎನ್. ಅಶ್ವತ್ಥ ನಾರಾಯಣ ಬೊಮ್ಮಾಯಿ ಸಂಪುಟದಲ್ಲಿಯೂ ಮುಂದುವರೆಯಲಿದ್ದಾರೆ.
ಒಕ್ಕಲಿಗ ಸಮುದಾಯದ ಆರ್. ಅಶೋಕ ಉಪಮುಖ್ಯಮಂತ್ರಿ ಯಾಗಲಿದ್ದಾರೆ ಎಂಬ ಮಾತು ಬಹಳ ಪ್ರಬಲವಾಗಿ ಕೇಳಿ ಬಂದಿತ್ತು.ಆದರೆ ಹೈಕಮಾಂಡ್ ಡಿಸಿಎಂ  ಹುದ್ದೆ ಸೃಷ್ಟಿ ಮಾಡಲು ಹೋದರೆ ಇಲ್ಲದ ರಂಪಾಟಕ್ಕೆ ಕಾರಣವಾಗಬಹದು ಎಂದು ಸಮ್ಮತಿ ನೀಡಿಲ್ಲ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು