ವಿಜಯ ಸಂಘರ್ಷ
ಚಾಮರಾಜನಗರ(ಹನೂರು): ಅಕ್ರಮ ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಪೊಲೀಸರು ಬಂಧಿಸಿ 4.ಕೆ.ಜಿ.935 ಗ್ರಾಂ. ಗಾಂಜ ವಶಪಡಿಸಿಕೊಂಡಿರುವ
ಘಟನೆ ತಾಲ್ಲೂಕಿನ ಪುಷ್ಪಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಬ್ಬಾಲ ಬಿನ್ ರಂಗಶೆಟ್ಟಿ ಬಂಧಿತ ಆರೋಪಿ.ಈತನ ತೋಟದ ಮನೆಯಲ್ಲಿ ಒಣ ಗಾಂಜಾ
ಸಂಗ್ರಹಣೆ ಮಾಡಿರುವ ಬಗ್ಗೆ ಖಚಿತ ಮಾಹಿತಿಯನ್ನಾಧಾರಿಸಿದ
ಅಬಕಾರಿ ಪೊಲೀಸರು ಅಬಕಾರಿ ಜಂಟಿ ಆಯುಕ್ತ ಮಾದೇಶ್ ಸೂಚನೆ ಮೇರೆಗೆ ಉಪ ಆಯುಕ್ತ ಕೆ.ಎಸ್.ಮುರುಳಿ ಅವರ ಮಾರ್ಗದರ್ಶನದಲ್ಲಿ
ಚಾಮರಾಜನಗರ ಅಬಕಾರಿ ಉಪ ಅಧೀಕ್ಷಕ ಮೋಹನ್ಕುಮಾರ್ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ನಂದಿನಿ ಮತ್ತು ಸಿಬ್ಬಂದಿಗಳ ತಂಡ
ನಿನ್ನೆ ತಡ ರಾತ್ರಿ 1.10 ಗಂಟೆ ಸಮಯದಲ್ಲಿ ಬಂಧಿತ ಆರೋಪಿ ತೋಟದ ಮನೆಯ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡು ಆರೋಪಿ ವಿರುದ್ಧ
ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಮೀನಾ, ಮಣಿಕಂಠ, ಮಹೇಂದ್ರ, ಸೋಮಣ್ಣ, ವೀರತಪ್ಪ, ಸಿದ್ದಯ್ಯ ಭಾಗವಹಿಸಿದ್ದರು.
ವರದಿ: ಪ್ರಭುಸ್ವಾಮಿ ಎಂ, ಹನೂರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795