ಸುಸ್ಥಿರ ಮೌಲ್ಯ ಜಾಲಕ್ಕೆ ಫ್ಲಿಪ್‍ಕಾರ್ಟ್ ಉತ್ತೇಜನ

 

ವಿಜಯ ಸಂಘರ್ಷ



ಬೆಂಗಳೂರು : ದೇಶೀಯ ಇ-ಕಾಮರ್ಸ್ ಕಂಪನಿ ಫ್ಲಿಪ್‍ಕಾರ್ಟ್ ವಿತರಣಾ ಜಾಲಕ್ಕೆ ಸೇರ್ಪಡೆಯಾಗುತ್ತಿರುವ ಮಾರಾಟಗಾರರು, ರೀಟೇಲರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಕಂಪನಿಯ ತಂಡಗಳ ಅವಿರತ ಶ್ರಮದಿಂದಾಗಿ ಪ್ಲಾಸ್ಟಿಕ್ ಹೊರತಾದ ಪ್ಯಾಕೇಜಿಂಗ್‍ಗಳಿಗೆ ಪರ್ಯಾಯ ಸುಸ್ಥಿರವಾದ ಪ್ಯಾಕೇಜಿಂಗ್ ವ್ಯವಸ್ಥೆಯ ಅಳವಡಿಕೆಯ ಪ್ರಮಾಣವೂ ಹೆಚ್ಚಾಗತೊಡಗಿದೆ. ಮಾರಾಟಗಾರ ಪಾಲುದಾರರೊಂದಿಗೆ ಬಾಳಿಕೆ, ಗಾತ್ರ ಮತ್ತು ವೆಚ್ಚದ ದಕ್ಷತೆಗಳನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸ ಲಾಗುತ್ತಿದೆ.

ಬರುವ ಆರ್ಡರ್‌ಗಳನ್ನು ಕ್ಷಿಪ್ರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಫ್ಲಿಪ್‍ಕಾರ್ಟ್ ದೇಶದ 90 ನಗರಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿದೆ. 2030 ರ ವೇಳೆಗೆ ಕಂಪನಿಯು ತನ್ನ ವಿತರಣಾ ಜಾಲದಲ್ಲಿ 25 ಸಾವಿರ  ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವ ಮೂಲಕ ಸಂಪೂರ್ಣವಾಗಿ ಅಂದರೆ ಶೇ.100 ರಷ್ಟು ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ತನ್ನ ಬದ್ಧತೆಯನ್ನು ಪೂರೈಸುವತ್ತ ಹೆಜ್ಜೆ ಇಟ್ಟಿದೆ. ಇದು ಹವಾಮಾನ ಸಮೂಹದ ಇವಿ100 ಅಭಿಯಾನದ ಭಾಗವಾಗಿದ್ದು, ಅದರಂತೆ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಸಾಗಿದೆ.

ಸಂಸ್ಥೆಯ ಸುಸ್ಥಿರತೆ ಮತ್ತು ಸಾಮಾಜಿಕ ಹೊಣೆಗಾರಿಕೆ ವಿಭಾಗದ ಮುಖ್ಯಸ್ಥ ಮಹೇಶ್ ಪ್ರತಾಪ್ ಸಿಂಗ್ ಮಾತನಾಡಿ,  “ಹಬ್ಬದ ಸೀಸನ್ ಎನ್ನುವುದು ನಮ್ಮ ಎಲ್ಲಾ ಪಾಲುದಾರರಿಗೆ ಪ್ರಗತಿಪರವಾದ ಮೌಲ್ಯವನ್ನು ಸೃಷ್ಟಿಸುವಂತಹದ್ದು. ಅಲ್ಲದೇ, ನಮ್ಮ ಪ್ರತಿ ಗ್ರಾಹಕರಿಗೆ ಪ್ರತಿ ಆರ್ಡರ್ ನೊಂದಿಗೆ ಸಮರ್ಥ ನೀಯವಾದ ಹಬ್ಬದ ಸೀಸನ್ ಅನ್ನು ತರುವ ಭರವಸೆಯನ್ನು ನೀಡಲು ನಮಗೆ ಹೆಮ್ಮೆ ಎನಿಸುತ್ತದೆ. ಈ ಹಬ್ಬದ ಸೀಸನ್‍ನಲ್ಲಿ ನಮ್ಮ ಸಾವಿರಾರು ವಿತರಣಾ ಪ್ರತಿನಿಧಿಗಳು 90 ನಗರಗಳ ಪಿನ್‍ಕೋಡ್‍ಗಳಲ್ಲಿ 2000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮೂಲಕ ಸಾವಿರಾರು ಉತ್ಪನ್ನಗಳನ್ನು ವಿತರಣೆ ಮಾಡಲಿದ್ದಾರೆ. ಇದು ನಮ್ಮಕಟ್ಟಕಡೆಯ ಗ್ರಾಹಕರಿಗೂ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ ಶೇ.100 ಕ್ಕೆ ನೂರರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವ ನಮ್ಮ ಗುರಿಯತ್ತ ಹೆಜ್ಜೆ ಇಟ್ಟಿರುವುದಾಗಿದ್ದು, ನಮಗೆ ಸಂತಸ ತಂದಿದೆ. ಬೆಂಗಳೂರು, ದೆಹಲಿ/ಎನ್‍ಸಿಆರ್, ಮುಂಬೈ, ಚೆನ್ನೈ, ವೈಧಾನ್, ಹೈದ್ರಾಬಾದ್, ವಿಡಿಶಾ, ಶಾಜಾಪುರ, ಪುಣೆ, ಸೊನಾಯ್, ಮೈಸೂರು, ರಾಂಪುರ, ಥಾಣೆ ಮತ್ತು ಫರಿದಾಬಾದ್ ಸೇರಿದಂತೆ ಇನ್ನಿತರೆ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿದ್ದೇವೆ. ಇದಲ್ಲದೇ, ಹಬ್ಬದ ಸಂದರ್ಭದಲ್ಲಿ ವಿತರಣಾ ಜಾಲದಲ್ಲಿ ಒಂದು ಬಾರಿ ಬಳಕೆ ಮಾಡುವಂತಹ ಪ್ಲಾಸ್ಟಿಕ್ ಅನ್ನು ಮುಕ್ತಗೊಳಿಸಲಿದ್ದೇವೆ’’ ಎಂದು ತಿಳಿಸಿದರು.

ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು