ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರ ಮನವಿ

 

ವಿಜಯ ಸಂಘರ್ಷ 



ಭದ್ರಾವತಿ: ಪ್ರಾಥಮಿಕ ಶಾಲಾ ಶಿಕ್ಷಕರ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಶಾಖಾ ವತಿಯಿಂದ ಮುಖ್ಯಮಂತ್ರಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮತ್ತು
ಶಾಸಕರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.

ಹಳೆನಗರದ ವೀರಶೈವ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕರ ಬಿ.ಕೆ.ಸಂಗಮೇಶ್ವರ್ ರವರಿಗೆ ಮನವಿ ಸಲ್ಲಿಸಿದರು.

ಸೇವಾ ನಿರತ ಪದವೀಧರ ಶಿಕ್ಷಕರಿಗೆ ಹಾಗೂ ನೇಮಕಾತಿ ತಿದ್ದುಪಡಿ ಮಾಡುವ ಮೂಲಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರುಗಳೆಂದು ಪದನಾಮೀಕರಿಸಿ ಜಿಪಿಟಿ ಕೈ ಬಿಡುವುದು, ಉನ್ನತ ವ್ಯಾಸಾಂಗಮಾಡಿ ಬಡ್ತಿ ಇಲ್ಲದ ಶಿಕ್ಷಕರಿಗೆ ಗೌರವ ಬೆಲೆ ಸಿಗುವಂತಾಗಬೇಕು,

ನೂತನ ಪಿಂಚಣಿ ಯೋಜನೆ ಕೈ ಬಿಟ್ಟು ಹಳೆಯ ಯೋಜನೆ ಜಾರಿಮಾಡು ವುದು, ಪ್ರತಿ ಶಾಲೆಗಳಿಗೆ ಮುಖ್ಯೋಪಾ ಧ್ಯಾಯರ ನೇಮಕಾತಿ, ಪ್ರತಿ ವಿಷಯ ಕ್ಕೂ ಓರ್ವ ಶಿಕ್ಷಕರನ್ನು ನೇಮಿಸುವುದು, ಸೇವಾ ಆಧಾರದ ಮೇಲೆ ಬಡ್ತಿ, ದೈಹಿಕ ಶಿಕ್ಷಕರ ಸಮಸ್ಯೆ ಪರಿಹರಿಸುವುದು, ಗ್ರಾಮೀಣ ಕೃಪಾಂಕ ವಜಾಗೊಂಡವರ ಸೇವೆ ಸತತಸೇವೆ ಎಂದು ಪರಿಗಣಿಸುವುದು, ಚುನಾವಣೆ ಸಂದರ್ಭದಲ್ಲಿ ಶಿಕ್ಷಕರನ್ನು ಮತಗಟ್ಟೆ ಅಧಿಕಾರಿಗಳೆಂದು ಪರಿಗಣಿಸ ದಿರುವುದು, ಶಾಲಾ ಅನುದಾನ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಬಸವರಾಜ್ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಸ್.ಕೆ. ಮೋಹನ್ ಶಿಕ್ಷಕರ ಸಂಘದ ಸಿ. ಜಯಪ್ಪ, ಯು. ಮಹಾದೇವ, ಸುಮತಿ ಕಾರಂತ್ ಸೇರಿದಂತೆ ಮತ್ತಿತರರು ಇದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು