ಶ್ರೀ ಸಾಮಾನ್ಯರಿಗೆ ಒಪ್ಪತ್ತಿನ ಊಟವು ಇಲ್ಲದಂತೆ ಮಾಡಿದ ಬಿಜೆಪಿ ಸರ್ಕಾರ : ಬೇಳೂರು

 

ವಿಜಯ ಸಂಘರ್ಷ



ಶಿವಮೊಗ್ಗ : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಬೆಲೆ ಏರಿಕೆ,  ಜನಪ್ರತಿ ನಿಧಿಗಳಿಗೊಂದು, ಜನಸಾಮಾನ್ಯರಿಗೊಂದು ಕೊರೋನ ಕಾನೂನು ಜಾರಿಗೆ ತಂದು ಶ್ರೀ ಸಾಮಾನ್ಯರನ್ನ ಹೀರುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಗೋಪಾಲ ಕೃಷ್ಣ ಬೇಳೂರು ಸರ್ಕಾರಗಳ ವಿರುದ್ಧ ಗುಡುಗಿದ್ದಾರೆ.

ಇಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನ ಇದ್ಯಾಗ್ಯೂ ಸೇಬಿನ ಹಾರ, ಸಚಿವರಾಗಿ ಬಂದವರಿಗೆ ಮೆರವಣಿಗೆ ಸನ್ಮಾನ ಮಾಡಿದಾಗ ಕೊರೋನ ಮರೆತು ಹೋದ ಸರ್ಕಾರ ಈಗ ಗಣೇಶ ಹಬ್ಬ ಆಚರಣೆಯಲ್ಲಿ ನೆನೆಪಾಗಿದೆಯಾ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ನೆಹರೂ ವಿರುದ್ಧ ಮಾತನಾಡು ವಷ್ಟು ಉದ್ಧಟತನ ತೋರಿದ್ದಾರೆ. ಹಾಗಾದರೆ ದೇಶಕ್ಕೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ದಿ.ನೆಹರೂ ಮತ್ತು  ಅವರ ಕುಟುಂಬ ದವರ ವಿರುದ್ಧ ಮಾತನಾಡಲು ಸಿ.ಟಿ. ರವಿಗೆ ಅಷ್ಟೊಂದು ಶಕ್ತಿ ಬಂತಾ ಎಂದು ಪ್ರಶ್ನಿಸಿ, ಬಿಜೆಪಿ ನಾಯಕರು ನಾಲಿಗೆ ಬಿಗಿಹಿಡಿದು ಮಾತನಾಡಬೇಕೆಂದು ಎಚ್ಚರಿಸಿದರು.

ಸಿಎಂ ಸ್ಥಾನ ತ್ಯಾಗ ಮಾಡುವಾಗ ಬಿಎಸ್ ವೈ ಕಣ್ಣೀರಿಟ್ಟೀದ್ದಾರೆ. ತ್ಯಾಗಮಾಡುವಾಗ ಕಣ್ಣೀರು ಏಕೆ ಎಂದು ಪ್ರಶ್ನಿಸಿದ ಬೇಳೂರು ಬಿಎಸ್ ವೈರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕೇಂದ್ರ ಸಚಿವ‌ ಪ್ರಹ್ಲಾದ್ ಜೋಷಿ ಮತ್ತು ಸಂತೋಷ್ ಕಾರಣವೆಂದರು. ಕಣ್ಣೀರಿಟ್ಟ ಮೇಲೆ ತ್ಯಾಗದ ಮಾತೇಕೆ ಎಂದರು.

ದೇಶದಲ್ಲಿ ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ಜನಾಶೀರ್ವಾದ ಮಾಡಲು ಹೊರಟಿದ್ದೀರಿ. ಈ ದೊಂಬರಾಟವೇಕೆ ಇದೇನಾ ದೇಶದ ಅಚ್ಚೇದಿನ್ ಎಂದು ಪ್ರಶ್ನಿಸಿದರು.

ಮಧ್ಯಮ ಮತ್ತು ಬಡ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇದು ದೇಶದ ದುರಂತ. ಕಾಂಗ್ರೆಸ್ ಸರ್ಕಾರ ಇದ್ದಾಗ ತೈಲ ಬೆಲೆ 2 ರೂ ಏರಿಸಿದ್ದಕ್ಕೆ ಪ್ರತಿಭಟನೆ ನಡೆಸಲಾಗಿತ್ತು. ಈಗ ಜನರ ಗೋಳನ್ನ ಕೇಳುವವ ರಿಲ್ಲದಂತಾಗಿದೆ.

ಸಾಗರ ತಾಲೂಕು ಕುಡುಕರ ಸಾಮ್ರಾಜ್ಯ ವಾಗುತ್ತಿದೆ. ಗಾಂಜಾ ಮತ್ತು ಓಸಿ ಎಗ್ಗಿಲ್ಲದೆ ನಡೆಯುತ್ತಿದೆ. ಎಸ್ಪಿ ಒಳ್ಳೆಯ ವರು ಎಂದು ಕೇಳಿದ್ದೇನೆ. ಆದರೆ ಇವರು ಸಚಿವರ ಮತ್ತು ಎಂಪಿ ಅವರ ಕೈಗೊಂಬೆ ನಾ ಎಂದು ಕಾದು ನೋಡುತ್ತೇವೆ.

ಆರಗ ಜ್ಞಾನೇಂದ್ರ ರವರಿಗೆ ಗೃಹಸಚಿವ  ಸ್ಥಾನ ನೀಡಿರುವುದು ಸರಿಯಿಲ್ಲ. ಮೈಸೂರು ಪ್ರಕರದಲ್ಲಿ 72 ಗಂಟೆಯಲ್ಲಿ ಪ್ರಕರಣ ಬೇಧಿಸಿದ್ದಾರೆ. ಜೈಲಿನಲ್ಲಿ ಸುಧಾರಣೆ ತರಲಾಗುತ್ತಿದೆ ಎಂದು ಹೇಳಿರುವುದನ್ನ ಸ್ವಾಗತಿಸುತ್ತೇನೆ ಎಂದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು