ವಿಜಯ ಸಂಘರ್ಷ
ಬೆಂಗಳೂರು: ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ನಿನ್ನೆಯಷ್ಟೆ ಮತ್ತೆ 25 ರೂ ಏರಿಕೆಯಾಗಿದ್ದು ತೈಲ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, ನರೇಂದ್ರ ಮೋದಿ ಪ್ರಧಾನಿಯಾಗಿ 7 ವರ್ಷ ಕಳೆದಿದೆ. ಈ ನಡುವೆ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಇಷ್ಟಾದರೂ ಅಚ್ಛೇ ದಿನ್ ಎನ್ನುತ್ತಿದ್ದಾರೆ. ಮೋದಿ ಸುಳ್ಳು ಹೇಳಿಕೊಂಡು ತಿರುಗಾಡು ತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ 886 ರೂ ಆಗಿದೆ. ಜನಸಾಮಾನ್ಯರು ಹೇಗೆ ಬದುಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಳು ವರ್ಷದಲ್ಲಿ ಪೆಟ್ರೊಲ್, ಡೀಸೆಲ್, ಅಡುಗೆ ಅನಿಲದಿಂದ ಹೆಚ್ಚುವರಿ ತೆರಿಗೆ 22 ಲಕ್ಷ ಕೋಟಿ ಸಂಗ್ರಹವಾಗಿದೆ. ಕರ್ನಾಟಕದಿಂದ 1.20 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲ ತೀರಿಸಬೇಕು ಅಂದಿದ್ದರು. ಆದರೆ ಸಾಲ ಇದ್ದದ್ದು 7 ಲಕ್ಷ ಕೋಟಿ, ಹೆಚ್ಚುವರಿ ತೆರಿಗೆ ಸಂಗ್ರಹ ಆಗುದ್ದು 22 ಲಕ್ಷ ಕೋಟಿ. ಈಗಲಾ ದರೂ ತೆರಿಗೆ ಕಡಿಮೆ ಮಾಡಿ ಎಂದು ಆಗ್ರಹಿಸಿದರು.
ಅಲ್ಲದೆ ನರೇಂದ್ರ ಮೋದಿ ಉದ್ಯಮಿ ಗಳ 7 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರು ಸಾಲ ಮಾಡಿರುವುದನ್ನ ಕಟ್ಟದಿದ್ದರೇ ರೈತರ ಮನೆ ಜಪ್ತಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795