ವಿಜಯ ಸಂಘರ್ಷ
ಭದ್ರಾವತಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಿನಿವಿಧಾನ ಸೌಧ ಮುಂಭಾಗದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಎಡ ಮತ್ತು ಬಲ ಭಾಗದ ಹಾಕಿರುವ ಜಾಗದಲ್ಲಿ ಸಾರ್ವಜನಿಕರು ಸತ್ಯಾಗ್ರಹ ನಡೆಸಲು ಹಾಕಲಾಗಿರುವ ಗ್ರಿಲ್ ತೆರವುಗೊಳಿಸುವುದು, ಕಾಳಿಂಗನಹಳ್ಳಿ ಸರ್ವೆ ನಂ : 2 ರಲ್ಲಿ 4 ಎಕರೆ 20 ಗುಂಟೆ ಜಮೀನು ಎಲ್ಲಮ್ಮ ಕೋರಿ ಕಣ್ಣಪ್ಪ ರವರ ಜಮೀನು ಕಬಳಿಸಲು ಸಂಚು ನಡೆಸಿರುವ ಕಂದಾಯ ಆಧಿಕಾರಿಗಳ ಕ್ರಮ, ಬಡವರ ಸಾವಿರಾರೂ ಪಡಿತರ ಚೀಟಿಗಳನ್ನು ರದ್ದುಗೊಳಿಸಿ, ದೀನ ದಲಿತರ ಪಿಂಚಣಿ ವಜಾಗೊಳಿಸಿರುವ ಕ್ರಮವನ್ನು ಖಂಡಿಸಿ.
ಶ್ರಮಜೀವಿ ಕಟ್ಟಡ ಕಾರ್ಮಿಕ ಮತ್ತು ಬೀದಿ ಬದಿ ವ್ಯಾಪಾರಿಗಳ ಹಲವು ಸೌಲಭ್ಯಗಳನ್ನು ನಿಜವಾದ ಫಲಾನು ಭವಿಗಳಿಗೆ ನೀಡದೆ ಮಧ್ಯವರ್ತಿಗಳು ಕಾರ್ಮಿಕ ಇಲಾಖೆ ಹಾಗೂ ನಗರಸಭೆ ಮಾಡುತ್ತಿರುವ ಅನ್ಯಾಯಗಳನ್ನು ಖಂಡಿಸಿ. ನಾಳೆ ಬೆಳಗ್ಗೆ 11 ಗಂಟೆಯಿಂದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ ನಡೆಸಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795