ನನ್ನ ದೃಷ್ಠಿಯಲ್ಲಿ ಸ್ವಾತಂತ್ರ್ಯ ವೆಂದರೆ ಏನು? ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

 


ವಿಜಯ ಸಂಘರ್ಷ



ಭದ್ರಾವತಿ:  'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ಸೈಲ್ ಅಂಗ ಸಂಸ್ಥೆಯಾದ ನಗರದ ವಿಐಎಸ್ಎಲ್ ಕಾರ್ಖಾನೆವತಿಯಿಂದ ಕನ್ನಡ ಭಾಷೆಯಲ್ಲಿ 'ಭಾರತ ಸ್ವಾತಂತ್ರ್ಯದ 75  ವರ್ಷಗಳು - ನನ್ನ ದೃಷ್ಠಿಯಲ್ಲಿ ಸ್ವಾತಂತ್ರ್ಯವೆಂದರೆ ಏನು?' ವಿಷಯವಾಗಿ ನ್ಯೂಟೌನ್ ಎಸ್.ಎ.ವಿ ಪ್ರೌಢಶಾಲೆಯಲ್ಲಿ ಶುಕ್ರವಾರ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.



ಕಾರ್ಖಾನೆಯ ಮಹಾ ಪ್ರಬಂಧಕರ ಪ್ರಭಾರಿ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ ಸ್ಪರ್ಧೆಗೆ ಚಾಲನೆ ನೀಡಿದರು. ಮಹಾ ಪ್ರಬಂಧಕ (ನಗರಾಡಳಿತ) ಮೋಹನ್ ರಾಜ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಹರಿಣಾಕ್ಷಿ, ನಿವೃತ್ತ ವೈದ್ಯೆ ಡಾ. ಎಸ್. ಕವಿತ ಇನ್ನಿತರರಿದ್ದರು.

 ಕನ್ನಡ ಶಿಕ್ಷಕ ನಯನ್ ಕುಮಾರ್ 'ಇಂದಿನ ಜನಾಂಗಕ್ಕೆ ಭಾರತ ಸ್ವಾತಂತ್ರ್ಯ ಸಂಗ್ರಾಮದಿಂದ ಕಲಿಯಬೇಕಾದ ಪಾಠಗಳು' ಎಂಬ ವಿಷಯ ಕುರಿತು ಮಾತನಾಡಿದರು.

ಅಶ್ವಿನಿ ಮತ್ತು ತಂಡದವರು ಪ್ರಾರ್ಥಿಸಿ. ಮಹಾ ಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಸ್ವಾಗತಿಸಿದರೆ, ಜೀವಿತಾ ಮತ್ತು ರಶ್ಮಿ ನಿರೂಪಿಸಿದರು.

ಒಟ್ಟು 18 ಶಾಲೆಗಳ 34 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನದ ರೂಪದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಕುರಿತು ಪುಸ್ತಕಗಳನ್ನು ನೀಡಲಾಯಿತು.

ವಿಜೇತ ವಿದ್ಯಾರ್ಥಿಗಳು:

ಎಸ್‌ಎವಿ ಪ್ರೌಢಶಾಲೆಯ ಇಂಚರ ಪ್ರಥಮ, ಕಾರೇಹಳ್ಳಿ ಬಿಜಿಎಸ್ ಪ್ರೌಢ ಶಾಲೆಯ ಶ್ರೇಯ ಎನ್ ಗೌಡ ದ್ವಿತೀಯ, ಎಸ್‌ಎವಿ ಪ್ರೌಢಶಾಲೆಯ ಅಫೀಯಾ ತಸ್ಮೀನ್ ತೃತೀಯ ಹಾಗು ಸೇಂಟ್ ಚಾರ್ಲ್ಸ್ ಕನ್ನಡ ಪ್ರೌಢಶಾಲೆಯ ಎಸ್. ಧನ್ಯಶ್ರೀ ಮತ್ತು ಪೂರ್ಣಪ್ರಜ್ಞ ಪ್ರೌಢ ಶಾಲೆಯ ಎಸ್. ರುಚಿತ ಹಾಗು ಕಾರೇಹಳ್ಳಿ ಬಿಜಿಎಸ್ ಪ್ರೌಢಶಾಲೆಯ ಎಸ್. ಶ್ರೀ ರಕ್ಷ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು