ವಿಜಯ ಸಂಘರ್ಷ
ಭದ್ರಾವತಿ: ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಮಿನಿವಿಧಾನ ಸೌಧ ಮುಂಭಾಗದಲ್ಲಿ ಶುಕ್ರವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಮರಣಾಂತ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಮಿನಿ ವಿಧಾನಸೌಧ ಮುಂಭಾಗದ ಎಡ ಮತ್ತು ಬಲ ಭಾಗದ ಜಾಗದಲ್ಲಿ ಬಡ, ಕೂಲಿ ಕಾರ್ಮಿಕ, ರೈತರು, ಸಾರ್ವಜನಿ ಕರು ಸತ್ಯಾಗ್ರಹ ನಡೆಸಲು ಸ್ಥಳಾವಕಾಶ ಕಲ್ಪಿಸಲು ಗ್ರಿಲ್ ತೆರವುಗೊಳಿಸುವುದು, ಈಗಿನ ತಾಲೂಕು ಆಡಳಿತ ಮಾಡಬೇಕಿದೆ.
ತಾಲೂಕಿನ ಬಾರಂದೂರು ಹೋಬಳಿಯ ಕಾಳಿಂಗನಹಳ್ಳಿ ಸರ್ವೆ ನಂ : 2 ರಲ್ಲಿ 4 ಎಕರೆ 20 ಗುಂಟೆ ಜಮೀನು ಪರಿಶಿಷ್ಟ ಜಾತಿಯ ಎಲ್ಲಮ್ಮ ಕೋರಿ ಕಣ್ಣಪ್ಪ ರವರ ಜಮೀನು ಮಂಜೂರು ಮಾಡಿದ್ದು, ಪಹಣಿಯಲ್ಲಿ ಹೆಸರು ನಮೂದಾಗಿರುತ್ತವೆ. ಕಂದಾಯ ಆಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಜಮೀನು ಕಬಳಿಸಲು ಸಂಚು ನಡೆಸಿರುತ್ತಿರುತ್ತಾರೆಂದು ಆರೋಪಿಸಿದರು.
ತಾಲ್ಲೂಕಿನಲ್ಲಿ 1200 ಕ್ಕೂ ಹೆಚ್ಚು ಬಿಪಿಎಲ್ ಬಡವರ ಪಡಿತರ ಚೀಟಿಗಳನ್ನು ಆದಾಯ ಮಿತಿ ಹೆಚ್ಚಲಾದೆ ಎಂದು ರದ್ದುಗೊಳಿಸಿರುವುದು ಖಂಡನೀಯ, ದೀನ ದಲಿತರ, ದಿವ್ಯಾಂಗರ, ವೃದ್ಯಾಪ ಪಿಂಚಣಿ ವೇತನ ಹಲವಾರು ತಿಂಗಳುಗಳಿಂದ ಸ್ಥಗಿತ ಗೊಂಡಿದೆ. ದಿನನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ಬಡವರ ಪರ ಕಿಂಚಿತ್ತೂ ಕಾಳಜಿ ತೋರದೆ ವಜಾಗೊಳಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಶ್ರಮಜೀವಿ ಕಟ್ಟಡ ಕಾರ್ಮಿಕ ಮತ್ತು ಬೀದಿ ಬದಿ ವ್ಯಾಪಾರಿಗಳ ಹಲವು ಸೌಲಭ್ಯಗಳನ್ನು ನಿಜವಾದ ಫಲಾನು ಭವಿಗಳಿಗೆ ನೀಡದೆ ಮಧ್ಯವರ್ತಿಗಳು ಕಾರ್ಮಿಕ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಅನರ್ಹ ಫಲಾನುಭವಿ ಗಳಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆ.
ಕೂಡಲೇ ನಗರಸಭೆ ಮತ್ತು ಕಾರ್ಮಿಕ ಇಲಾಖಾಧಿಕಾರಿಗಳನ್ನು ಸೇವೆಯಿಂದ ವಜಾಮಾಡುವಂತೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್.ರಾಜು ನೇತೃತ್ವ ವಹಿಸಿದ್ದರು. ಕಾರ್ಯಾಧ್ಯಕ್ಷ ಐ.ಎಲ್. ಅರುಣ್ ಕುಮಾರ್, ಉಪಾಧ್ಯಕ್ಷ ಬ್ರಹ್ಮಲಿಂಗಯ್ಯ ಚಂದ್ರಶೇಖರ, ಸಂಚಾಲಕರಾದ ಶೇಖರ್, ಜಯರಾಮ್ ಪ್ರತಿಭಟನಾ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795